ETV Bharat / state

ದೇವಸ್ಥಾನ ತೆರವಿನ ವಿವರಣೆ ಕೇಳಿ ಸರ್ಕಾರದಿಂದ ನೋಟಿಸ್ ಬಂದಿದೆ: DC ಗೌತಮ್ ಬಗಾದಿ - ತಹಶೀಲ್ದಾರ್‌ಗೆ ನೋಟಿಸ್

ನಂಜನಗೂಡು ದೇವಾಲಯ ತೆರವು ವಿಚಾರವಾಗಿ ಪ್ರತಿಕ್ರಿಯಿಸಿವ ಜಿಲ್ಲಾಧಿಕಾರಿ ಸರ್ಕಾರದಿಂದ ವಿವರಣೆ ಕೇಳಿ ನೋಟಿಸ್ ಬಂದಿದೆ. ಹೀಗಾಗಿ ಮುಂದಿನ ಕಾರ್ಯಾಚರಣೆ ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದಿದ್ದಾರೆ.

DC Gowtham bagadi
ಜಿಲ್ಲಾಧಿಕಾರಿ ಗೌತಮ್ ಬಗಾದಿ
author img

By

Published : Sep 14, 2021, 2:30 PM IST

ಮೈಸೂರು: ಮೈಸೂರಿನಲ್ಲಿ ದೇವಸ್ಥಾನ ತೆರವು ವಿಚಾರವಾಗಿ ವಿವರಣೆ ಕೇಳಿ ಸರ್ಕಾರದಿಂದ ನೋಟಿಸ್ ಬಂದಿದೆ ಎಂದು ಜಿಲ್ಲಾಧಿಕಾರಿ ಗೌತಮ್ ಬಗಾದಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಹಾಗೂ ತಹಶೀಲ್ದಾರ್‌ಗೆ ನೋಟಿಸ್ ಬಂದಿದೆ ಎಂದಿದ್ದಾರೆ.

ಆ ನೋಟಿಸ್​​ಗೆ ಉತ್ತರವನ್ನು ಕೊಡುತ್ತೇವೆ. ಅದೇ ಸರ್ಕಾರದ‌ ಅಧಿಕೃತ ನೋಟಿಸ್ ಆಗಿದೆ. ನೋಟಿಸ್​​​ನಲ್ಲಿ ಏನಿದೆ ಎಂಬುದನ್ನು‌ ನಾನು ಹೇಳಲು ಸಾಧ್ಯವಿಲ್ಲ. ಆದರೆ, ಸರ್ಕಾರಕ್ಕೆ‌ ಸಂಪೂರ್ಣ ವಿವರ ನೀಡುತ್ತೇವೆ ಎಂದರು.

ದೇವಸ್ಥಾನ ತೆರವಿನ ವಿವರಣೆ ಕೇಳಿ ಸರ್ಕಾರದಿಂದ ನೋಟಿಸ್ ಬಂದಿದೆ: ಜಿಲ್ಲಾಧಿಕಾರಿ ಗೌತಮ್ ಬಗಾದಿ

ಕಾರ್ಯಾಚರಣೆ ನಿಲ್ಲಿಸುವ ಸಂಬಂಧದ ಪ್ರಶ್ನೆಗೆ ಉತ್ತರಿಸಿದ ಡಿಸಿ ಗೌತಮ್, ಸರ್ಕಾರದ ನಿರ್ದೇಶನಕ್ಕಾಗಿ ನಾವು ಕಾಯುತ್ತಿದ್ದೇವೆ. ಸರ್ಕಾರದ ಉತ್ತರ ಬರುವವರೆಗೂ ಸದ್ಯಕ್ಕೆ ಕಾರ್ಯಾಚರಣೆ ಇರುವುದಿಲ್ಲ. ಸರ್ಕಾರದ‌ ಮುಂದಿನ‌ ನಿರ್ದೇಶನದ ವರೆಗೂ ಯಥಾಸ್ಥಿತಿಯಲ್ಲಿರಲಿದೆ ಎಂದಿದ್ದಾರೆ.

ಓದಿ: ಹುಬ್ಬಳ್ಳಿ - ಧಾರವಾಡ: ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾದ ಕಳ್ಳರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.