ETV Bharat / state

ಕೊರೊನಾ ಸಂಕಷ್ಟದ ನಡುವೆಯೂ ತಾಯಿ ಚಾಮುಂಡಿ ಕಾಣಿಕೆ ಹುಂಡಿ ಸೇರಿದೆ ___ಲಕ್ಷ ರೂ. - Chamundi hill Cash collection

ಚಾಮುಂಡಿ ಬೆಟ್ಟದಲ್ಲಿ ಇಂದು ಹುಂಡಿ ಹಣ ಎಣಿಕೆಯಾಗಿದ್ದು ಪ್ರತಿವರ್ಷದಂತೆ ಈ ವರ್ಷವೂ ಭಕ್ತರಿಂದ ದೇವರಿಗೆ ಮೋಸ ಮುಂದುವರಿದಿದೆ. ಬ್ಯಾನ್ ಆದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಪತ್ತೆಯಾಗಿವೆ.

65 lakhs collection in Dasara month at Chamundi hill
ಚಾಮುಂಡೇಶ್ವರಿ ದೇಗುಲ
author img

By

Published : Nov 11, 2020, 4:20 PM IST

Updated : Nov 11, 2020, 4:36 PM IST

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಇಂದು ಹುಂಡಿ ಹಣ ಎಣಿಕೆ ನಡೆಸಲಾಗಿದೆ. ಅಕ್ಟೋಬರ್ (ದಸರಾ) ತಿಂಗಳ ಹಣ ಎಣಿಕೆ ಮಾಡಿದಾಗ 65 ಲಕ್ಷದ 61 ಸಾವಿರದ 229 ರೂ. ಕಾಣಿಕೆ ಸಂಗ್ರಹವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಸಾರಿ ಕಡಿಮೆ ಹಣ ಸಂಗ್ರಹಗೊಂಡಿದೆ.

65 lakhs collection in Dasara month at Chamundi hill
ಚಾಮುಂಡೇಶ್ವರಿ ದೇಗುಲ

2000 ಸಾವಿರ ಮುಖ ಬೆಲೆಯ 98 ನೋಟುಗಳು, 500 ಮುಖಬೆಲೆಯ 4,932 ನೋಟುಗಳು, 29 ಸಾವಿರ 1 ರೂಪಾಯಿ ನಾಣ್ಯ, 17 ಸಾವಿರದಷ್ಟು 2 ರೂಪಾಯಿ ನಾಣ್ಯ ಸಂಗ್ರಹವಾಗಿದೆ ಎಂದು ಚಾಮುಂಡೇಶ್ವರಿ ದೇವಾಲಯದ ಇಓ ಯತಿರಾಜ್ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ತಾಯಿ ಚಾಮುಂಡೇಶ್ವರಿ ದೇಗುಲದ ಹುಂಡಿಯಲ್ಲಿ ಈ ಬಾರಿಯೂ ಬ್ಯಾನ್ ಆದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ದಸರಾ ಮಹೋತ್ಸವ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅನೇಕ ಉತ್ಸವಗಳು ಇದ್ದ ಕಾರಣ ಈ ತಿಂಗಳಿನಲ್ಲಿ ಈ ಪ್ರಮಾಣದ ಸಂಗ್ರಹಗೊಂಡಿದೆ. ಕಳೆದ‌ ವರ್ಷದ ದಸರಾ ಸಂದರ್ಭದಲ್ಲಿ ಒಂದು ಕೋಟಿಗೂ ಹೆಚ್ಚು ಹುಂಡಿ ಹಣ ಸಂಗ್ರಹವಾಗಿತ್ತು. ಈ‌ ವರ್ಷ ಇದು ಕಡಿಮೆಯಾಗಿದೆ.

Last Updated : Nov 11, 2020, 4:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.