ಮೈಸೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಇಂದು 296 ಹೊಸ ಸೋಂಕಿತ ಕೇಸ್ಗಳು ಪತ್ತೆಯಾಗಿವೆ. ಮಹಾಮಾರಿ ಸೋಂಕಿನಿಂದ 3 ಜನ ಸಾವನ್ನಪ್ಪಿದ್ದಾರೆ.
ಇಂದು 73 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಾರ್ಚ್ 26 ರಿಂದ ಜುಲೈ 27 ರವರೆಗೆ 3,163 ಜನರಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ 896 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು ಸಕ್ರಿಯ ಪ್ರಕರಣಗಳು 2,153 ಆಗಿದ್ದು, ಇಲ್ಲಿಯವರೆಗೆ ಒಟ್ಟು 115 ಜನ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್. ಜಿ ಶಂಕರ್ ತಿಳಿಸಿದ್ದಾರೆ.