ಮೈಸೂರು: ಜಿಲ್ಲೆಯಲ್ಲಿ 220 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 894 ಮಂದಿ ಡಿಸ್ಚಾರ್ಜ್ ಆಗಿದ್ದರೆ 3 ಮಂದಿ ಸಾವನ್ನಪ್ಪಿದಾರೆ. ಒಟ್ಟು ಜಿಲ್ಲೆಯ ಸೋಂಕಿತರ ಸಂಖ್ಯೆ 46,392ಕ್ಕೆ ಏರಿಕೆಯಾಗಿದೆ.
ಅಲ್ಲದೆ ಒಂದೇ ದಿನ ಸೋಂಕಿನಿಂದ 894 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 42,132 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 3,321 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೇ ಇಂದು ಮೂವರು ಮೃತಪಟ್ಟು, ಸಾವನ್ನಪ್ಪಿದವರ ಸಂಖ್ಯೆ 939ಕ್ಕೆ ತಲುಪಿದೆ.