ಮಂಡ್ಯ: ಸಾಲದ ಸುಳಿಗೆ ಸಿಲುಕಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವಿಗೀಡಾಗಿದ್ದು, ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ತಿಳಿಸಿದ್ದಾನೆ.
ಕಳೆದ ಒಂದು ವಾರದ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಬೋವಿ ಕಾಲೊನಿಯ ಲೋಕೇಶ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾನೆ. ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಲೊಕೇಶ್ ತಿಳಿಸಿದ್ದ ಎನ್ನಲಾಗಿದ್ದು, ಮಿಮ್ಸ್ ಆಡಳಿತ ಮಂಡಳಿ ಕಣ್ಣುಗಳನ್ನು ಪಡೆದುಕೊಂಡಿದೆ.