ETV Bharat / state

ಶ್ರೀನಿಮಿಷಾಂಬ ದೇವಾಲಯದಲ್ಲಿ ಭಕ್ತರ ಕಾಣಿಕೆ ಸಂಗ್ರಹಿಸಲು ಬಂತು ಗೂಗಲ್ ಪೇ, ಫೋನ್ ಪೇ

ಮಂಡ್ಯದ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಶ್ರೀನಿಮಿಷಾಂಬ ದೇವಾಲಯದಲ್ಲಿ ಭಕ್ತರಿಂದ ಕಾಣಿಕೆ ಸಂಗ್ರಹಿಸಲು 2 ಬೃಹತ್ ಇ ಸ್ಕ್ಯಾನರ್ ಪರದೆ ಅಳವಡಿಕೆ ಮಾಡಲಾಗಿದೆ.

two-large-e-scanner-screen-installed-in-nimishamba-temple-in-mandya
ಶ್ರೀನಿಮಿಷಾಂಬ ದೇವಾಲಯದಲ್ಲಿ ಭಕ್ತರ ಕಾಣಿಕೆ ಸಂಗ್ರಹಿಸಲು ಬಂತು ಗೂಗಲ್ ಪೇ, ಫೋನ್ ಪೇ
author img

By

Published : Aug 13, 2022, 7:34 AM IST

ಮಂಡ್ಯ : ರಾಜ್ಯದ ಪ್ರಸಿದ್ಧ ಶಕ್ತಿದೇವತಾ ಕೇಂದ್ರಗಳಲ್ಲಿ ಒಂದಾದ ಗಂಜಾಂನ ಶ್ರೀನಿಮಿಷಾಂಬ ದೇವಾಲಯದಲ್ಲಿ ಭಕ್ತರ ಕಾಣಿಕೆಯ ಹುಂಡಿಯ ಜೊತೆಗೆ ಇ ಕಾಣಿಕೆ ಯೋಜನೆಗೆ ಚಾಲನೆ ನೀಡಲಾಗಿದೆ. ಭಕ್ತರು ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂ ಮೂಲಕ ಕಾಣಿಕೆ ಪಾವತಿ ಮಾಡಬಹುದಾಗಿದೆ. ಇದಕ್ಕಾಗಿ ದೇವಾಲಯದಲ್ಲಿ 2 ಬೃಹತ್ ಇ-ಸ್ಕ್ಯಾನರ್ ಪರದೆ ಅಳವಡಿಸಲಾಗಿದೆ.

two-large-e-scanner-screen-installed-in-nimishamba-temple-in-mandya
ಶ್ರೀನಿಮಿಷಾಂಬ ದೇವಾಲಯದಲ್ಲಿ ಭಕ್ತರ ಕಾಣಿಕೆ ಸಂಗ್ರಹಿಸಲು ಬಂತು ಗೂಗಲ್ ಪೇ, ಫೋನ್ ಪೇ

ಶಕ್ತಿ ದೇವತೆಯ ಆರಾಧನೆಗೆ ಪ್ರಮುಖ ಸ್ಥಳವಾಗಿರುವ ಶ್ರೀನಿಮಿಷಾಂಬ ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಮಂಗಳವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮತ್ತು ರಜೆ ದಿನಗಳಲ್ಲಿ ಸಾಕಷ್ಟು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು,ಹೆಚ್ಚಿನ ಹುಂಡಿ ಹಣ ಸಂಗ್ರಹವಾಗುತ್ತದೆ.

ಈ ದೇವಾಲಯದಲ್ಲಿ ಒಟ್ಟು 19 ಹುಂಡಿಗಳಿದ್ದು, ಪ್ರತಿ 3 ತಿಂಗಳಿಗೊಮ್ಮೆ ದೇವಾಲಯದ ಆಡಳಿತ ಮಂಡಳಿ, ಶ್ರೀರಂಗಪಟ್ಟಣದ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಹುಂಡಿ ತೆರೆದು, ಸ್ತ್ರೀಶಕ್ತಿ ಸ್ವಸಹಾಯ ಸಂಘದ ನೂರಾರು ಸದಸ್ಯರೊಂದಿಗೆ 1 ದಿನ, ವಿಡಿಯೋ ಚಿತ್ರೀಕರಣದ ಕಣ್ಗಾವಲಿನೊಂದಿಗೆ ಹುಂಡಿ ಎಣಿಕೆ ಕಾರ್ಯ ನಡೆಸುತ್ತಾರೆ.

2 ಬೃಹತ್ ಇ ಸ್ಕ್ಯಾನರ್ ಪರದೆ ಅಳವಡಿಕೆ : ಇದೀಗ ಈ ಶ್ರಮವನ್ನು ಕಡಿತಗೊಳಿಸುವ ಜೊತೆಗೆ ದೇವಾಲಯಗಳಲ್ಲಿ ಆಧುನಿಕತೆ ತಂತ್ರಜ್ಞಾನದ ಸದ್ಬಳಕೆ,ಹುಂಡಿಗಳ ಕಳ್ಳತನ ಮತ್ತು ಸ್ಥಳಾವಕಾಶದ ಕೊರತೆ ನೀಗಿಸಲು ಈ ಯೋಜನೆಯನ್ನು ತರಲಾಗಿದೆ. ಎಸ್‌ಬಿಐ ಬ್ಯಾಂಕ್ ಸಹಕಾರದೊಂದಿಗೆ ಈಗಾಗಲೇ ದೇವಾಲಯದ 2 ಕಡೆಗಳಲ್ಲಿ ಕಾಣಿಕೆ ಸಂಗ್ರಹಿಸಲು ಬೃಹತ್ ಇ-ಸ್ಕಾನರ್ ಪರದೆಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ : ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ: ನ್ಯಾ.ಭಕ್ತವತ್ಸಲ ಆಯೋಗ ವರದಿ ಜಾರಿಗೆ ಸಂಪುಟ ಸಮ್ಮತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.