ಮಂಡ್ಯ: ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ನಲ್ಲಿ ಭಾರತ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದು, ಈ ಹಿನ್ನಲೆಯಲ್ಲಿ ಹತಾಶೆಗೊಂಡ ಅಭಿಮಾನಿ ಅಂಗಡಿಯಲ್ಲಿದ್ದ ಟಿವಿ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಮದ್ದೂರು ಪಟ್ಟಣದ ಮೈಸೂರು ಹೆದ್ದಾರಿ ಸಮೀಪದ, ಬೆಳ್ಳಿ ಬಿರಿಯಾನಿ ಪ್ಯಾರೆಡೈಸ್ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್ ಮಾಲೀಕ ಬೆಳ್ಳಿ ಶಂಕರ್ ಟಿವಿ ಒಡೆದು ಹಾಕಿದ್ದಾರೆ. ಇನ್ನು ಮುಂದೆ ಕ್ರಿಕೆಟ್ ನೋಡುವುದೇ ಇಲ್ಲ. ವಿಶ್ವಕಪ್ ತುಂಬಾ ನಿರಾಸೆ ತಂದಿದೆ ಎಂದು ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 18ರನ್ಗಳ ಸೋಲು ಕಾಣುವ ಮೂಲಕ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.