ETV Bharat / state

ಮಂಡ್ಯದಲ್ಲಿ ನಾನು ಮಾಡಿರುವ ಕೆಲಸಗಳು ನನಗೆ ಆತ್ಮತೃಪ್ತಿ ನೀಡಿವೆ: ಡಿಸಿ ವೆಂಕಟೇಶ್‌ - S. Ashwathi, the new DC

ಶ್ರೀರಂಗಪಟ್ಟಣ ದಸರಾ, ಗಗನಚುಕ್ಕಿ ಜಲಪಾತೋತ್ಸವವನ್ನು ಯಶಸ್ವಿಯಾಗಿ ಮಾಡಿದ್ದೇವೆ. ತಮಿಳು ಕಾಲೋನಿ ಸ್ಥಳಾಂತರ ಪ್ರಕ್ರಿಯೆ ಪ್ರಾರಂಭವಾಗಿದ್ದು, ಏಪ್ರಿಲ್‌ನಲ್ಲಿ 650 ಮನೆಗಳ ನಿರ್ಮಾಣ ಪೂರ್ಣಗೊಂಡು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಜಿಲ್ಲೆಯಲ್ಲಿ ನಾನು ಮಾಡಿರುವ ಕೆಲಸಗಳು ನನಗೆ ತೃಪ್ತಿ ತಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ. ವಿ. ವೆಂಕಟೇಶ್‌ ಹೇಳಿದ್ದಾರೆ.

DC V. Venkatesh
ನೂತನ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅವರಿಗೆ ಅಧಿಕಾರ ಹಸ್ತಾಂತರಿಸಿದ ಡಾ.ಎಂ. ವಿ. ವೆಂಕಟೇಶ್‌
author img

By

Published : Feb 16, 2021, 12:24 PM IST

ಮಂಡ್ಯ: ಒಂದೂವರೆ ವರ್ಷ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದೇನೆ. ಜಿಲ್ಲೆಯಲ್ಲಿ ಮಾಡಿರುವ ಕೆಲಸಗಳು ಆತ್ಮತೃಪ್ತಿ ತಂದಿವೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಡಾ.ಎಂ. ವಿ. ವೆಂಕಟೇಶ್‌ ಸಂತಸ ವ್ಯಕ್ತಪಡಿಸಿದರು.

ನೂತನ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಸಮಸ್ಯೆಗಳೆಲ್ಲವೂ ಮಂಜಿನಂತೆ ಕರಗಿ ಹೋಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಶ್ರೀರಂಗಪಟ್ಟಣ ದಸರಾ, ಗಗನಚುಕ್ಕಿ ಜಲಪಾತೋತ್ಸವ ಯಶಸ್ವಿಯಾಗಿ ಮಾಡಿದ್ದೇವೆ. ತಮಿಳು ಕಾಲೋನಿ ಸ್ಥಳಾಂತರ ಪ್ರಕ್ರಿಯೆ ಪ್ರಾರಂಭವಾಗಿದ್ದು, ಏಪ್ರಿಲ್‌ನಲ್ಲಿ 650 ಮನೆಗಳ ನಿರ್ಮಾಣ ಪೂರ್ಣಗೊಂಡು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಮೆಡಿಕಲ್‌ ಕಾಲೇಜಿಗೆ 50 ಎಕರೆ ಜಮೀನು ನೀಡಲು, ಜಿಲ್ಲೆಗೆ ಐಐಟಿ ತರಲು ಯೋಜಿಸಲಾಗಿದೆ. ಇದಕ್ಕಾಗಿ 350 ಎಕರೆ ಜಾಗ ಗುರುತಿಸಲಾಗಿದೆ ಎಂದು ಜಿಲ್ಲೆಯ ಕೆಲಸದ ಬಗ್ಗೆ ಹೇಳಿದರು.

ನೂತನ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅವರಿಗೆ ಅಧಿಕಾರ ಹಸ್ತಾಂತರಿಸಿದ ಡಾ.ಎಂ. ವಿ. ವೆಂಕಟೇಶ್‌

ಕಬ್ಬು ಬೆಳೆಗಾರರ ಸಮಸ್ಯೆ ಉಲ್ಬಣವಾಗಿತ್ತು. ಅಧಿಕಾರಿಗಳ ಸಹಕಾರದೊಂದಿಗೆ ಬೇರೆ ಕಾರ್ಖಾನೆಗೆ ಕಬ್ಬು ಸಾಗಿಸುವ, ನಿಗದಿತ ಸಮಯದಲ್ಲಿ ಹಣ ಸಂದಾಯ ಮಾಡಿಸುವ ಕೆಲಸ ಮಾಡಲಾಯಿತು. ಕೋವಿಡ್‌ ಸಂಕಷ್ಟದಲ್ಲಿ ಎಲ್ಲ ವೈದ್ಯಕೀಯ ಸಿಬ್ಬಂದಿ, ಕಂದಾಯ, ಪೊಲೀಸ್‌ ಇಲಾಖೆ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಂತ್ರಿಸಲು ಶ್ರಮಿಸಿದ್ದೇವೆ. ಪ್ರಾರಂಭದಲ್ಲಿ ಮುಂಬೈ ಪ್ರಕರಣಗಳು ಸಾಕಷ್ಟು ತಲ್ಲಣ ಉಂಟು ಮಾಡಿತ್ತು. ಇದನ್ನು ನಿಯಂತ್ರಿಸುವಲ್ಲಿ ನನ್ನ ವೈದ್ಯಕೀಯ ಶಿಕ್ಷಣವೂ ಸಾಕಷ್ಟು ನೆರವಾಗಿತ್ತು. ಸಾವಿನ ಪ್ರಮಾಣ 152 ಇದ್ದರೂ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದು 100 ಮಂದಿ ಮಾತ್ರ ಎಂದರು.

ಓದಿ: ವಿಜಯೇಂದ್ರ ಭ್ರಷ್ಟಾಚಾರದಲ್ಲಿ ರಾಜಾಹುಲಿ: ಸಿದ್ದರಾಮಯ್ಯ

ಅಧಿಕಾರ ಸ್ವೀಕರಿಸಿದ ನೂತನ ಜಿಲ್ಲಾಧಿಕಾರಿ ಎಸ್‌. ಅಶ್ವಥಿ ಮಾತನಾಡಿ, ಈ ಹಿಂದೆ ಚಿಕ್ಕಮಗಳೂರು, ದಾವಣಗೆರೆಯಲ್ಲಿ ಜಿ.ಪಂ ಸಿಇಒ ಆಗಿ ಕಾರ್ಯನಿರ್ವಹಿಸಿದ್ದೇನೆ. ಜಿಲ್ಲೆಯಲ್ಲಿನ ಸವಾಲುಗಳ ಬಗ್ಗೆ ಡಾ.ಎಂ.ವಿ. ವೆಂಕಟೇಶ್‌ ಅವರು ತಿಳಿಸಿದ್ದಾರೆ. ಅವರು ಪ್ರಾರಂಭ ಮಾಡಿರುವ ಕೆಲಸಗಳನ್ನು ಪೂರ್ಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದೇ ಮೊದಲು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಜಿಲ್ಲೆಯನ್ನು ಅಭಿವೃದ್ಧಿ ಕೊಂಡೊಯ್ಯಲು ಎಲ್ಲ ಅಧಿಕಾರಿಗಳು ಸಹಕರಿಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.