ETV Bharat / state

ಸರ್ಕಾರದ ಸೂಪರ್‌ಸೀಡ್ ನೋಟಿಸ್‌ಗೆ ಸೆಡ್ಡು ಹೊಡೆದ ಮನ್‌ಮುಲ್‌ ಆಡಳಿತ ಮಂಡಳಿ

ಸೂಪರ್ ಸೀಡ್ ಮಾಡಬಾರದೇಕೆ? ಎಂದು ಮನ್​ಮುಲ್​ ಆಡಳಿತ ಮಂಡಳಿಗೆ ಸಹಕಾರ ಸಂಘದ ಹೆಚ್ಚುವರಿ ನಿಬಂಧಕರ ಮೂಲಕ ರಾಜ್ಯ ಸರ್ಕಾರ 30(2) (ಐವಿ) ಅನ್ವಯ ನೋಟಿಸ್ ನೀಡಿತ್ತು. ಈ ನೋಟಿಸ್ ಜಾರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ, ಉಚ್ಚ‌ ನ್ಯಾಯಾಲಯದ ಮೂಲಕ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದೆ.

http://10.10.50.85//karnataka/28-June-2021/kn-mnd-28-02-super-seed-noties-photo-ka10026_28062021103610_2806f_1624856770_580.jpg

author img

By

Published : Jun 28, 2021, 11:43 AM IST

Updated : Jun 28, 2021, 12:18 PM IST

ಮಂಡ್ಯ: ಜಿಲ್ಲಾ ಹಾಲು ಒಕ್ಕೂಟ (ಮನ್​ಮುಲ್​)ನಲ್ಲಿ ನಡೆದಿದೆ ಎನ್ನಲಾದ ಹಾಲು ಕಲಬೆರಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ಒತ್ತಡಕ್ಕೆ ಮಣಿದು ಸೂಪರ್ ಸೀಡ್ ಮಾಡಬಾರದೇಕೆ? ಎಂದು ಮನ್​ಮುಲ್​ ಆಡಳಿತ ಮಂಡಳಿಗೆ ಸಹಕಾರ ಸಂಘದ ಹೆಚ್ಚುವರಿ ನಿಬಂಧಕರ ಮೂಲಕ ರಾಜ್ಯ ಸರ್ಕಾರ 30(2) (ಐವಿ) ಅನ್ವಯ ನೋಟಿಸ್ ನೀಡಿತ್ತು.

ಅಲ್ಲದೇ, ಆಡಳಿತ ಮಂಡಳಿ ಸ್ಟೇ (ಯಥಾಸ್ಥಿತಿ ಆದೇಶ) ತರಬಹುದೆಂಬ ಕಾರಣಕ್ಕೆ ಕೇವಿಯಟ್ ಕೂಡ ಸಲ್ಲಿಸಿತ್ತು. ಆದರೆ, ನೋಟಿಸ್ ಜಾರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ, ಉಚ್ಚ‌ ನ್ಯಾಯಾಲಯದ ಮೂಲಕ ಸ್ಟೇ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆಡಳಿತ ಮಂಡಳಿ ಸರ್ಕಾರಕ್ಕೆ ಸೆಡ್ಡು‌ ಹೊಡೆದಿದೆ.

ಉಚ್ಚ ನ್ಯಾಯಾಲಯ ಸಹಕಾರ ಇಲಾಖೆ‌ ಹೆಚ್ಚುವರಿ ನಿಬಂಧಕರು ಕಾರಣ ಕೇಳಿ ನೀಡಿದ್ದ ನೋಟಿಸ್ ಸರಿಯಾದ ಕ್ರಮವಲ್ಲ. ಈಗಾಗಲೇ‌ ಮೂರ್ನಾಲ್ಕು ಕಡೆಯಿಂದ ತನಿಖೆಯಾಗುತ್ತಿರುವ ಕಾರಣ ನೋಟಿಸ್ 'ಅಸಿಂಧು' ಎಂದು ತೀರ್ಪು ನೀಡಿದೆ. ಇದ್ರಿಂದ ಸೂಪರ್ ಸೀಡ್ ಹಂತದಲ್ಲಿದ್ದ ಆಡಳಿತ ಮಂಡಳಿ ನಿರ್ದೇಶಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಅಲೆ ಅಡಗಿಸಲು ಮೂಲ ಕಾಂಗ್ರೆಸಿಗರ ಹೊಸ ತಂತ್ರ: "ದಲಿತ ಸಿಎಂ ಅಲೆ"

Last Updated : Jun 28, 2021, 12:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.