ಮಂಡ್ಯ : ಒಂದು ಧರ್ಮ ಗ್ರಂಥದ ಆಧಾರದ ಮೇಲೆ ಎಲ್ಲಾ ನಡೆಯಬೇಕು ಅಂದ್ರೆ ಅದು ಆಗುವುದಿಲ್ಲ. ಹಾಗೇನಾದರು ಆಗಬೇಕೆಂದರೆ ನೀವು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಹಿಜಾಬ್ ವಿವಾದ ಕುರಿತು ಮಾತನಾಡಿದ ಅವರು, ಹಿಜಾಬ್ ಮೂರು ಅಡಿಯ ಬಟ್ಟೆಯ ಪ್ರಶ್ನೆ ಅಲ್ಲ. ಇದರ ಹಿಂದೆ ಇರುವಂತಹ ದುಷ್ಟ ಮಾನಸಿಕತೆ ಇವತ್ತು ಕೆಲಸ ಮಾಡುತ್ತಿದೆ. ಹಿಜಾಬ್ ಮುಖ್ಯ, ಧರ್ಮ ಮುಖ್ಯ ಅಂತ ಹೇಳುವಂತಹ ಮಾನಸಿಕತೆ ದೇಶದಲ್ಲಿ ಜಾಸ್ತಿಯಾಗುತ್ತಿದೆ ಎಂದು ಕಿಡಿಕಾರಿದರು.
ನಾನು ಆ ವಿದ್ಯಾರ್ಥಿಗೆ ಹೇಳುತ್ತೇನೆ, ಎಲ್ಲಿ ಇಸ್ಲಾಂ ಹುಟ್ಟಿತೋ ಅದೇ ಸೌದಿ ಅರೇಬಿಯಾದಲ್ಲಿ ಇವತ್ತು ಬುರ್ಖಾ, ಹಿಜಾಬ್ ಕಡ್ಡಾಯವಾಗಿಲ್ಲ. ಇನ್ನೂ ಕೆಲವೊಂದು ದೇಶಗಳಲ್ಲಿ ನಿಷೇಧ ಮಾಡಿದ್ದಾರೆ. ಇಲ್ಲಿ ಯಾಕೆ ವಿವಾದ ಎಬ್ಬಿಸುತ್ತಿದ್ದೀರಿ ಎಂದು ಮುತಾಲಿಕ್ ಪ್ರಶ್ನಿಸಿದರು. ನೀವು ಈ ದೇಶದಲ್ಲಿ ಹುಟ್ಟಿದ್ದು, ಇಲ್ಲಿನ ಸಂವಿಧಾನ, ಕಾನೂನು, ಪೊಲೀಸ್ ಠಾಣೆಗೆ ಗೌರವ ಕೊಡಿ ಎಂದು ಹೇಳಿದರು.
ಇದನ್ನೂ ಓದಿ : ಉಕ್ರೇನ್ ಏರ್ಪೋರ್ಟ್ನಲ್ಲಿ ಸಿಲುಕಿರುವ ರಾಜ್ಯದ 10 ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ: ಸಿಎಂ ಬೊಮ್ಮಾಯಿ
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇದೆ, ಸಂವಿಧಾನ ಇದೆ. ಇದರ ಪ್ರಕಾರ ನಡೆಯಬೇಕು ಎಂದ ಅವರು, ಹರ್ಷ ಕೊಲೆಗೈದ ಕೊಲೆಗಡುಕರು ಮೋಸ್ಟ್ ಕ್ರಿಮಿನಲ್ಗಳು. ಇವತ್ತು ಹೋಂ ಮಿನಿಸ್ಟರ್ಗೆ ಹೇಳಿದ್ದೇನೆ, ಮುಂದೆ ಈ ತರಹದ ಘಟನೆ ನಡೆಯದಂತೆ ಕ್ರಮ ವಹಿಸಲಾಗುತ್ತೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.