ಮಂಡ್ಯ: ಕೌಟುಂಬಿಕ ಕಲಹದಿಂದ ಅಳಿಯನೊಬ್ಬ ತನ್ನ ಮಾವನನ್ನೇ ಕೊಡಲಿಯಿಂದ ಹೊಡೆದು ಕೊಂದ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ.
ಚಿನಕುರಳಿ ಗ್ರಾಮದ ಸುರೇಶ್ (50) ಹತ್ಯೆಯಾದ ವ್ಯಕ್ತಿ. ಈತನ ಮಗಳನ್ನು 8 ವರ್ಷದ ಹಿಂದೆ ಇದೇ ಗ್ರಾಮದ ರಘು ಅಲಿಯಾಸ್ ಜಿಮ್ಮಿ ಮದುವೆಯಾಗಿದ್ದ. ಕಳೆದ ಕೆಲ ದಿನಗಳಿಂದ ಕುಟುಂಬದಲ್ಲಿ ಜಗಳವಾಗುತ್ತಲೇ ಇತ್ತು. ಇಂದು ಕೂಡ ಜಗಳ ವಿಕೋಪಕ್ಕೆ ತಿರುಗಿ ಕುಪಿತಗೊಂಡ ರಘು ಕೊಡಲಿಯಿಂದ ತನ್ನ ಮಾವನ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
![family-strife-the-son-in-law-who-killed-his-father-in-law-in-mandya](https://etvbharatimages.akamaized.net/etvbharat/prod-images/kn-mnd-11-02-murder-av-ka10026_11122020152250_1112f_1607680370_567.jpg)
ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.