ETV Bharat / state

ವಲಸಿಗರ ಆಗಮನ:  ಮಂಡ್ಯದಲ್ಲಿ ಇನ್ನಷ್ಟು ಕ್ವಾರಂಟೈನ್ ಕೇಂದ್ರಗಳ ಹುಡುಕಾಟ - Mandya Corona case

ಅಂದಾಜಿನ ಪ್ರಕಾರ ಮಂಡ್ಯ ಜಿಲ್ಲೆಗೆ ಈಗಾಗಲೇ ಜಿಲ್ಲೆಗೆ ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ. ಅಲ್ಲದೇ ಇನ್ನೂ 3 ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆ ಜಿಲ್ಲಾಡಳಿತ ಇನ್ನಷ್ಟು ಕ್ವಾರಂಟೈನ್​ ಕೇಂದ್ರಗಳ ಹುಡುಕಾಟದಲ್ಲಿ ನಿರತವಾಗಿದೆ.

Searching for More Quarantine Centers in Mandya
ಜಿಲ್ಲೆಗೆ ಆಗಮಿಸುವವರ ಸಂಖ್ಯೆ ಹೆಚ್ಚಳ: ಮಂಡ್ಯದಲ್ಲಿ ಇನ್ನಷ್ಟು ಕ್ವಾರಂಟೈನ್ ಕೇಂದ್ರದ ಹುಡುಕಾಟ
author img

By

Published : May 17, 2020, 12:04 AM IST

ಮಂಡ್ಯ: ಲಾಕ್​ಡೌನ್​ ಸಡಿಲಿಕೆಯಾದ ಬಳಿಕ ಜಿಲ್ಲೆಗೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಮುಂಬೈನಿಂದ ವಾಪಸ್​​ ಆಗಿದ್ದವರಲ್ಲಿ ಕೊರೊನಾ ದೃಢಪಟ್ಟ ಬೆನ್ನಲ್ಲೆ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಇದೀಗ ಜಿಲ್ಲೆಗೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕ್ವಾರಂಟೈನ್ ಕೇಂದ್ರಗಳನ್ನು ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದೆ.

ಅಂದಾಜಿನ ಪ್ರಕಾರ ಈಗಾಗಲೇ ಜಿಲ್ಲೆಗೆ ಸಾವಿರಕ್ಕೂ ಹೆಚ್ಚು ಮಂದಿ ಬಂದಿದ್ದು, ಇನ್ನೂ 3 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರಗಳನ್ನು ಹೆಚ್ಚಿನ ಮಟ್ಟದಲ್ಲಿ ಸಜ್ಜುಗೊಳಿಸುತ್ತಿದೆ. ಜಿಲ್ಲೆಗೆ 3 ಸಾವಿರಕ್ಕೂ ಹೆಚ್ಚು ಮಂದಿ ಮುಂಬೈ ಒಂದರಿಂದಲೇ ಆಗಮಿಸುವ ನಿರೀಕ್ಷೆ ಇದೆ. ಇದರ ಜೊತೆಗೆ ವಿವಿಧ ಕಡೆ ಉದ್ಯೋಗ ಮಾಡುತ್ತಾ ಕೊರೊನಾ ಲಾಕ್ ಡೌನ್​ನಿಂದ ಸಂಕಷ್ಟಕ್ಕೆ ಒಳಗಾದವರೂ ಜಿಲ್ಲೆಯತ್ತ ಮುಖ ಮಾಡಿದ್ದಾರೆ.

ಸದ್ಯ ಕೆ.ಆರ್.ಪೇಟೆ, ನಾಗಮಂಗಲ, ಮಂಡ್ಯ ತಾಲೂಕು ಆಡಳಿತಗಳು ಕ್ವಾರಂಟೈನ್ ಕೇಂದ್ರಗಳಿಗಾಗಿ ಹೊಸ ಹೊಸ ಹಾಸ್ಟೆಲ್​​ಗಳು, ವಸತಿ ಶಾಲೆಗಳು ಹಾಗೂ ಲಾಡ್ಜ್​​ಗಳನ್ನು ಸಜ್ಜುಗೊಳಿಸುತ್ತಿವೆ. ಹೀಗಾಗಿ ಅಧಿಕಾರಿಗಳು ಹಾಸ್ಟೆಲ್​ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 890 ಮಂದಿ ಹಾಸ್ಟೆಲ್ ಕ್ವಾರಂಟೈನ್​ನಲ್ಲಿದ್ದರೆ, 3,665 ಮಂದಿ ಹೋಮ್​ ಕ್ವಾರಂಟೈನ್​​ನಲ್ಲಿದ್ದಾರೆ. ಹೋಮ್​​ ಕ್ವಾರಂಟೈನ್​​ನಲ್ಲಿರುವವರೇ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದಾರೆ. ಹೀಗಾಗಿ ಇವರಿಗೂ ಕ್ವಾರಂಟೈನ್ ಕೇಂದ್ರವನ್ನು ತೆರೆಯಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.