ETV Bharat / state

ಮಂಡ್ಯದಲ್ಲಿ ಕಾಂಗ್ರೆಸ್​​ನ ಪ್ರಜಾಧ್ವನಿ ಸಮಾವೇಶ.. ನಾಯಕರಿಗೆ ಅದ್ಧೂರಿ ಸ್ವಾಗತ - ಈಟಿವಿ ಭಾರತ ಕನ್ನಡ

ಸಕ್ಕರೆ ನಾಡಿಗೆ ಪ್ರವೇಶಿಸಿದ ಪ್ರಜಾಧ್ವನಿ ಯಾತ್ರೆ - ಕೈನಾಯಕರಿಗೆ ಮಂಡ್ಯದಲ್ಲಿ ಅದ್ದೂರಿಯಾಗಿ ಸ್ವಾಗತ - ಮುಂಬರುವ ಚುನಾವಣೆಯಲ್ಲಿ ಕೈ ಸರ್ಕಾರ ಅಧಿಕಾರಕ್ಕೆ ತರುವಂತೆ ಕೈ ನಾಯಕರ ಕರೆ.

prajadwani-yatre
ಕಾಂಗ್ರೇಸ್ ಪ್ರಜಾಧ್ವನಿ ಸಮಾವೇಶ
author img

By

Published : Jan 27, 2023, 10:08 PM IST

ಮಂಡ್ಯ: ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಇಂದು ಸಕ್ಕರೆನಾಡಿಗೆ ಪ್ರವೇಶ ಮಾಡಿತು. ಪ್ರಜಾಧ್ವನಿ ಯಾತ್ರೆ ಮೂಲಕ ಜೆಡಿಎಸ್‌ ಭದ್ರಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿ ಪ್ರದರ್ಶನ ಮಾಡಿತು. ಪ್ರಜಾಧ್ವನಿ ಸಮಾವೇಶದಲ್ಲಿ ಬಿಜೆಪಿ, ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ ಕೈ ನಾಯಕರು, ಚುನಾವಣೆಗೆ ರಣಕಹಳೆ ಮೊಳಗಿಸಿದರು.

ಮೈಸೂರಿನಿಂದ ಮಂಡ್ಯಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್​​ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದ ಕೈ ನಾಯಕರ ಪಡೆಗೆ ಜಿಲ್ಲೆಯಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯ್ತು. ಕ್ರೇನ್ ಮೂಲಕ ಬೃಹತ್ ಕಬ್ಬು, ಬೆಲ್ಲ ಹಾಗೂ ಪೈನಾಪಲ್ ಹಾರ ಹಾಕುವ ಮೂಲಕ ಸ್ವಾಗತ ಕೋರಲಾಯಿತು. ಮಂಡ್ಯ ವಿವಿ ಆವರಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಭತ್ತ, ರಾಗಿ ರಾಶಿಗೆ ಪೂಜೆ ಮಾಡಿ, ಜ್ಯೋತಿ ಬೆಳಗುವ ಮೂಲಕ ಕಾಂಗ್ರೆಸ್​ ನಾಯಕರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಇದೇ ವೇಳೆ, ಮಂಡ್ಯದ ಕಾರ್ತಿಕ್ ಎಂಬುವರು ಡಿಕೆಶಿಗೆ ಎತ್ತೊಂದನ್ನ ಉಡುಗೊರೆಯಾಗಿ ನೀಡಿ, ರಾಜ್ಯಾದ್ಯಂತ ಸಂಚರಿಸಿ ಪಕ್ಷ ಅಧಿಕಾರಕ್ಕೆ ತರಲಿ, ಸಿಎಂ ಆಗಲಿ ಅಂತಾ ಆಶಿಸಿದ್ರು. ಅಭಿಮಾನಿಕೊಟ್ಟ ಉಡುಗೊರೆಯನ್ನ ಡಿಕೆಶಿ ಪ್ರೀತಿಯಿಂದಲೇ ಸ್ವೀಕಾರ ಮಾಡಿದರು.

ನಾವು ಕೊಟ್ಟ ಮಾತನ್ನು ತಪ್ಪಲ್ಲ ಎಂದ ಸಿದ್ದರಾಮಯ್ಯ: ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 200 ಯೂನಿಟ್​ ವಿದ್ಯುತ್​, 10ಕೆಜಿ ಅಕ್ಕಿ, ಪ್ರತಿ ಮಹಿಳೆ ಯಜಮಾನಿಗೆ ವಾರ್ಷಿಕ 24 ಸಾವಿರ ರೂಪಾಯಿ ಕೊಡುವಂತೆ ಅಧಿಕಾರಕ್ಕೆ ಬಂದ ಮೊದಲನೆ ದಿನವೇ ಆದೇಶ ಹೊರಡಿಸಲಿದ್ದೇವೆ. ಕೊಟ್ಟ ಮಾತನ್ನು ತಪ್ಪಲ್ಲ ನಾವು, ತಪ್ಪಿದರೆ ರಾಜಕೀಯದಲ್ಲೇ ಇರುವುದಿಲ್ಲ. ರಾಜಕೀಯ ಮಾಡುವುದು ಜನರಿಗೆ ಟೋಪಿ ಹಾಕುವುದಕ್ಕಲ್ಲ ಎಂದರು.

ಮಂಡ್ಯದಲ್ಲಿ ರಾಜ ಮಹಾರಾಜರು ಕಾಲದಿಂದ ಸಕ್ಕೆರೆ ಕಾರ್ಖಾನೆಗಳಿವೆ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿ ಸಕ್ಕರೆ ಕಾರ್ಖಾನೆಗಳು ನಡೆಯುವಂತೆ ಮಾಡುತ್ತಿದ್ದೆ. ಕುಮಾರಸ್ವಾಮಿ, ಬಿಜೆಪಿ ಬಂದ ಮೇಲೆ ಅದು ನಿಂತು ಹೋಯಿತು. ಈ ವರ್ಷ ಗೊಂದಲದೊಂದಿಗೆ ಬಿಜೆಪಿಯವರು ಮತ್ತೆ ಅದನ್ನು ಪ್ರಾರಂಭ ಮಾಡಿದ್ದಾರೆ ಎಂದರು.

ದೇಶದಲ್ಲಿ ಶಾಂತಿ ನೆಲೆಸಬೇಕಾದರೆ, ದೇಶದ ಎಲ್ಲಾ ವರ್ಗದ ಜನ ನೆಮ್ಮದಿಯಿಂದ ಇರಬೇಕಾದರೆ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಸಾಧ್ಯ. ಹೀಗಾಗಿ, 2023ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳನ್ನ ಧಿಕ್ಕರಿಸಿ, ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವಂತೆ ಕೈ ನಾಯಕರು ಕರೆಕೊಟ್ಟರು. ಬಳಿಕ ಪಕ್ಷದ ನಾಯಕರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಒಟ್ಟಾರೆ, ಜೆಡಿಎಸ್ ಭದ್ರಕೋಟೆ ಭೇದಿಸುವ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ತರಲು ಕೈ ನಾಯಕರು ಪ್ರಯತ್ನ ಮಾಡ್ತಿದ್ದಾರೆ.

ಇದನ್ನೂ ಓದಿ: ದೇವೇಗೌಡರ ಮಾನಸ ಪುತ್ರ ಕೈ ತೆಕ್ಕೆಗೆ; ಮಾಜಿ ಸಚಿವ ಎಚ್ ನಾಗೇಶ್​​​​ಗೂ ಸಂಕ್ರಾಂತಿ ಸಿಹಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.