ETV Bharat / state

ಮಂಡ್ಯದಲ್ಲೂ ಆಕ್ಸಿಜನ್‌ ಕೊರತೆ: ಅಧಿಕಾರಿಗಳ ಜೊತೆ ಸಚಿವ ಸುಧಾಕರ್ ಸಭೆ - ಕರ್ನಾಟಕ ಲಾಕ್​ಡೌನ್

ಮಂಡ್ಯದಲ್ಲಿ ಆಕ್ಸಿಜನ್ ಕೊರತೆಯಾದ ಹಿನ್ನೆಲೆಯಲ್ಲಿ ಮಂಡ್ಯ ಮೆಡಿಕಲ್ ಕಾಲೇಜಿಗೆ ಸಚಿವ ಸುಧಾಕರ್ ಭೇಟಿ ನೀಡಿ ಸಭೆ ನಡೆಸಿದರು.

ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಸುಧಾಕರ್
ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಸುಧಾಕರ್
author img

By

Published : May 4, 2021, 12:48 AM IST

Updated : May 4, 2021, 9:34 AM IST

ಮಂಡ್ಯ: ಸಕ್ಕರೆನಾಡಿನಲ್ಲಿ ಆಕ್ಸಿಜನ್ ಸಮಸ್ಯೆ ಉಲ್ಬಣ ಹಿನ್ನೆಲೆಯಲ್ಲಿ ಮಂಡ್ಯ ಮೆಡಿಕಲ್ ಕಾಲೇಜಿಗೆ ಸಚಿವ ಸುಧಾಕರ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಸುಮಾರು 1 ಗಂಟೆ ಸಭೆ ನಡೆಸಿದ ಸಚಿವರು, ಕೋವಿಡ್ ಮತ್ತಷ್ಟು ಉಲ್ಬಣಿಸದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು‌. ಈ ವೇಳೆ ಸಚಿವ ನಾರಾಯಣಗೌಡ, ಡಿಸಿ ಅಶ್ವಥಿ, ಎಸ್ಪಿ ಅಶ್ವನಿ, ಡಿಹೆಚ್ಓ ಮಂಚೇಗೌಡ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆ ಬಳಿಕ ಸಚಿವ ಡಾ.ಕೆ.ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದ್ದು, ಕೋವಿಡ್ ಬೆಡ್​ಗಳ ಅಗತ್ಯವಾಗಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಶೇ.50ರಷ್ಟು ಬೆಡ್ ಕೋವಿಡ್​​ಗೆ ಮೀಸಲು ಇಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಅಧಿಕಾರಿಗಳ ಜೊತೆ ಸಚಿವ ಸುಧಾಕರ್ ಸಭೆ
ಜಿಲ್ಲೆಗೆ ಆಕ್ಸಿಜನ್ ಕಡ್ಡಾಯವಾಗಿ ಬೇಕಿದೆ. ಹೀಗಾಗಿ ಮಿಮ್ಸ್ ಆಕ್ಸಿಜನ್ ಟ್ಯಾಂಕ್ ಸದಾ ತುಂಬಿರಬೇಕು. ಆದ್ದರಿಂದ ಹೆಚ್ಚುವರಿಯಾಗಿ 300-350 ಜಂಬೂ ಸಿಲಿಂಡರ್ ಆಕ್ಸಿಜನ್ ಸರಬರಾಜು ಆಗಬೇಕಿದೆ. ಬಳ್ಳಾರಿಯಿಂದ ಮಂಡ್ಯಕ್ಕೆ ಪ್ರತಿನಿತ್ಯ 7KL ಆಕ್ಸಿಜನ್ ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಹೊರ ರಾಜ್ಯಗಳಿಂದ ಬಂದವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಅವರಿಗೆ ಸಚಿವ ಸುಧಾಕರ್ ಸೂಚನೆ ನೀಡಿದರು. (ಇದನ್ನೂ ಓದಿ: 'ರಿಸೈನ್ ಸುಧಾಕರ್' ಕಾಂಗ್ರೆಸ್ ಅಭಿಯಾನ: 11 ಲಕ್ಷ ಮಂದಿ ಬೆಂಬಲ)

Last Updated : May 4, 2021, 9:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.