ಮಂಡ್ಯ: ದೇವಸ್ಥಾನದ ಗೇಟ್ ಮುಂಭಾಗ ಬಸವ ಬಂದು ನಿಂತ ಹಿನ್ನೆಲೆ ದೊಡ್ಡರಸಿನಕೆರೆಯ ಸಣ್ಣಕ್ಕಿ ರಾಯ ಸ್ವಾಮಿ ದೇವಾಲಯದ ಬಾಗಿಲನ್ನು ತಾತ್ಕಾಲಿಕವಾಗಿ ತಹಶೀಲ್ದಾರ್ ಓಪನ್ ಮಾಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ದೇವಾಲಯಕ್ಕೆ ಟ್ರಸ್ಟ್ ಅಧ್ಯಕ್ಷರು ಬೀಗ ಹಾಕಿದ್ದರು. ಸೋಮವಾರದ ಪೂಜೆಗೆ ಬಂದಿದ್ದ ಬಸವ ಬೆಳಗ್ಗೆಯಿಂದಲೇ ಗೇಟ್ ಬಳಿ ದೇವರ ದರ್ಶನಕ್ಕೆ ಕಾದು ಕುಳಿತಿತ್ತು.
ಇದನ್ನ ಗಮನಿಸಿದ ತಹಶೀಲ್ದಾರ್ ನರಸಿಂಹಮೂರ್ತಿ, ಗ್ರಾಮಸ್ಥರೊಂದಿಗೆ ಸಂಧಾನ ಸಭೆ ನಡೆಸಿ ತಾತ್ಕಲಿಕವಾಗಿ ಮುಜರಾಯಿ ಅರ್ಚಕರಿಂದ ಪೂಜೆ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬಳಿಕ ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ಬಾಗಿಲನ್ನು ಓಪನ್ ಮಾಡಿಸಿದ್ದಾರೆ.
ಈ ವೇಳೆ, ದೇವಾಲಯದ ಒಳಗೆ ಪ್ರವೇಶಿಸಲು ಗೇಟ್ನಿಂದ ಬಾರದೆ ನಿಂತಲ್ಲೇ ನಿಂತಿದ್ದ ಬಸಪ್ಪನ ಕಾಲಿಗೆ ಅರ್ಚಕರು, ಮುಖಂಡರು ನಮಸ್ಕರಿಸಿ ದೇವಸ್ಥಾನ ಶುದ್ಧೀಕರಣ ಮಾಡಿ ಹೋಮ ನೆರವೇರಿಸುವುದಾಗಿ ಬೇಡಿಕೊಂಡಿದ್ದಾರೆ. ಬಳಿಕ ಗೇಟ್ ಒಳಗೆ ಪ್ರವೇಶಿಸಿದ ಬಸವ, ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಗರ್ಭಗುಡಿ ಬಳಿ ಬಾರದೇ ವಾಪಸ್ ತೆರಳಿದೆ.