ಮಂಡ್ಯ: ಮಳವಳ್ಳಿ ಪಟ್ಟಣದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಬಾಲಕಿಯ ನಿವಾಸಕ್ಕೆ ಶುಕ್ರವಾರ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಬಾಲಕಿಯ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿ, ಈ ಕೃತ್ಯ ಇಡೀ ದೇಶ, ರಾಜ್ಯವೇ ತಲೆತಗ್ಗಿಸುವ ವಿಚಾರವಾಗಿದೆ. ಕೃತ್ಯ ಮಾಡಿದವನಿಗೆ ಗಲ್ಲಿಗೆ ಏರಿಸಬೇಕು ನಾವು ಪೋಷಕರ ಜೊತೆ ಇರುತ್ತೇವೆ. ಇದಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡಬೇಕು, ಇಲ್ಲಿ ರಾಜಕೀಯ ಬೇಡ. ಇವತ್ತು ಜೈಲಿಗೆ ಹೋಗ್ತಾನೆ, 5-6 ವರ್ಷ ಇರ್ತಾನೆ. ಒಳ್ಳೆ ಊಟ, ತಿಂಡಿ ಹಾಕ್ತಾರೆ ಮತ್ತೆ ಬರ್ತಾನೆ ಹಾಗೇ ಆಗುವುದು ಬೇಡ ಉಗ್ರವಾದ ಶಿಕ್ಷೆ ವಿಧಿಸಬೇಕೆಂದು ಹೇಳಿದರು.
ಇನ್ನು ನೊಂದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇರಬೇಕು, ಕೇವಲ ಅಧಿಕಾರಕ್ಕಾಗಿ ಬರಬಾರದು ಎಂದು ಸಂಸದೆ ಸುಮಲತಾ ಹೆಸರು ಬಳಸದೇ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು. ಎಂಪಿ, ಎಂಎಲ್, ಮಿನಿಸ್ಟರ್ ಎಂದು ಇರಬಾರದು, ಅದು ರಾಜಕಾರಣವಲ್ಲ ನೊಂದವರ ಜೊತೆಗೆ ನಾವು ನಿಲ್ಲಬೇಕು, ಅದೇ ಧರ್ಮ. ಅದನ್ನ ಮಾಡಲಿಲ್ಲ ಅಂದರೆ ಹೇಗೆ ಎಂದು ನಿಖಿಲ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಮಂಡ್ಯ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ: ಕಾಮುಕನಿಗೆ ಕಠಿಣ ಶಿಕ್ಷೆ ಆಗಲೆಂದು ಸಿದ್ದರಾಮಯ್ಯ ಆಗ್ರಹ