ಮಂಡ್ಯ: ಮದ್ಯದ ಅಮಲಿನಲ್ಲಿ ಪಾಪಿ ಮಗನೋರ್ವ ತಂದೆಯನ್ನೇ ಕೊಂದಿರುವ ಘಟನೆ, ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ.
ಸಣ್ಣಮರೀಗೌಡ(68) ಮಗನಿಂದ ಹತ್ಯೆಗೀಡಾಗಿರುವ ವ್ಯಕ್ತಿ. ಅವರ ಮಗ ಸಿಂಗ್ರೀಗೌಡ (40) ತಂದೆಯನ್ನು ಹತ್ಯೆ ಮಾಡಿದ ಆರೋಪಿ. ಈತ ಕುಡಿದು ಬಂದು ಕ್ಷುಲ್ಲಕ ಕಾರಣಕ್ಕೆ ತಂದೆಯ ತಲೆಯನ್ನು ಗೋಡೆಗೆ ಜಜ್ಜಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.