ETV Bharat / state

ಮಂಡ್ಯಗೆ ಹೆಚ್​ಡಿಕೆ ಏನೂ ಮಾಡಿಲ್ಲ, ಕೇವಲ ಮಂಕು ಬೂದಿ ಎರಚುತ್ತಿದ್ದಾರೆ: ಚಲುವರಾಯಸ್ವಾಮಿ ಕಿಡಿ - Mandya people cheated by Kumaraswamy

ಕುಮಾರಸ್ವಾಮಿ ಆಳ್ವಿಕೆ ಅವಧಿಯಲ್ಲೇ ಮೈಶುಗರ್, ಪಿಎಸ್ಎಸ್​​ಕೆ ಮುಚ್ಚಿದ್ದು. ಈಗ ಸುಳ್ಳು ಹೇಳಿಕೊಂಡು ಜಿಲ್ಲೆಗೆ ಬಂದಿದ್ದಾರೆ. 14 ತಿಂಗಳ ಅವಧಿ ಮಂಡ್ಯ ಜಿಲ್ಲೆಗೆ ಕರಾಳ ಆಡಳಿತವಾಗಿತ್ತು. ಅವರು ಜಿಲ್ಲೆಗೆ ಏನೂ ಮಾಡಿಲ್ಲ, ಕೇವಲ ಮಂಕು ಬೂದಿ ಎರಚುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದರು.

ಮಾಜಿ ಸಚಿವ ಎನ್. ಚಲುವರಾಯಸ್ವಾಮಿ
author img

By

Published : Oct 6, 2019, 2:54 PM IST

ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಧಿಕಾರದ ಅವಧಿಯಲ್ಲಿ ಮಂಡ್ಯ ಜನರಿಗೆ ಮೋಸ ಮಾಡಿದ್ದಾರೆ. 14 ತಿಂಗಳ ಅವಧಿ ಜಿಲ್ಲೆಗೆ ಕರಾಳ ಆಡಳಿತವಾಗಿತ್ತು. ಅವರು ಜಿಲ್ಲೆಗೆ ಏನೂ ಮಾಡಿಲ್ಲ, ಕೇವಲ ಮಂಕು ಬೂದಿ ಎರಚುತ್ತಿದ್ದಾರೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದರು.

ಮಾಜಿ ಸಚಿವ ಎನ್. ಚಲುವರಾಯಸ್ವಾಮಿ

ನಗರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡಬಾರದು ಅಂದುಕೊಂಡಿದ್ದೆ. ಆದರೆ ಜಿಲ್ಲೆಯ ಜನರನ್ನು ಅವರು ಮರಳು ಮಾಡುತ್ತಿದ್ದಾರೆ, ಮೋಸ ಮಾಡುತ್ತಿದ್ದಾರೆ. ಹೀಗಾಗಿ ಹೀಗೆ ಹೇಳಬೇಕಾಯಿತು. ಇನ್ನು ಮುಂದೆಯಾದರೂ ಮಂಡ್ಯ ಜನರು ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬೇಕು. ಕುಮಾರಸ್ವಾಮಿ ಆಳ್ವಿಕೆ ಅವಧಿಯಲ್ಲೇ ಮೈಶುಗರ್, ಪಿಎಸ್ಎಸ್​​ಕೆ ಮುಚ್ಚಿದ್ದು. ಈಗ ಸುಳ್ಳು ಹೇಳಿಕೊಂಡು ಜಿಲ್ಲೆಗೆ ಬಂದಿದ್ದಾರೆ. 8 ಸಾವಿರ ಕೋಟಿ ರೂಪಾಯಿ ಕೊಟ್ಟೆ ಅನ್ನುತ್ತಾರೆ, ಹಾಗಾದರೆ ಎಷ್ಟು ಕೆಲಸವಾಗಿದೆ ಅನ್ನೋದನ್ನು ತೋರಿಸಲಿ. ಈಗ ನಡೆಯುತ್ತಿರುವ ಕಾಮಗಾರಿಗಳು ಸಿದ್ದರಾಮಯ್ಯನವರ ಸರ್ಕಾರದ ಆಡಳಿತದ ಅವಧಿಯದ್ದು, ಸುಳ್ಳು ಹೇಳಿದರೆ ಜನ ನಂಬೋದಿಲ್ಲ ಎಂದರು.

ನಾನು ಸಿಎಂ ಯಡಿಯೂರಪ್ಪ ಜೊತೆಯೂ ಚೆನ್ನಾಗಿ ಇದ್ದೇನೆ. ಯೋಗೇಶ್ವರ್ ಜೊತೆಯೂ ಚೆನ್ನಾಗಿ ಇದ್ದೇನೆ. ಅದೇ ರೀತಿ ಜೆಡಿಎಸ್​​ನ ಕೆಲ ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದೇನೆ. ರಾತ್ರಿ ಯಡಿಯೂರಪ್ಪ ಮನೆಗೆ ಯಾಕೆ ಹೋಗಲಿ? ಬೇಕಾದರೆ ಬೆಳಗ್ಗೆಯೇ ಹೋಗುತ್ತೇವೆ. ಜಿಲ್ಲೆಯ ಸಮಸ್ಯೆ ಕುರಿತು ಚರ್ಚೆ ಮಾಡುತ್ತೇವೆ. ಕೆಲವು ಕೆಲಸಗಳನ್ನು ಮಾಡಿಸುತ್ತಿದ್ದೇವೆ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಜಿಲ್ಲೆಯಲ್ಲಿ 7 ಜೆಡಿಎಸ್ ಶಾಸಕರಿದ್ದು, ಜಿಲ್ಲೆಯ ಸಮಸ್ಯೆ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ. ಸಮಸ್ಯೆ ಬಗೆಹರಿಯದೇ ಇದ್ದರೆ ವಿಧಾನಸೌಧದಲ್ಲಿ ಧರಣಿ ಮಾಡಲಿ. ಅದು ಬಿಟ್ಟು ಕೆಲಸ ಆಗುತ್ತಿಲ್ಲ ಎಂದು ಕುಳಿತಿದ್ದಾರೆ. ಕುಮಾರಸ್ವಾಮಿಯವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಲ್ಲವೇ ಅವರೂ ಹೋರಾಟ ಮಾಡಲಿ. ಮೈಶುಗರ್, ಪಿಎಸ್​ಎಸ್​ಕೆ ಕಾರ್ಖಾನೆ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ಸಿಎಂ ಸೇರಿದಂತೆ ಸಚಿವರನ್ನೂ ಭೇಟಿ ಮಾಡಿ ಗಮನ ಸೆಳೆಯಲಾಗುವುದು. ಸಂಸದರೊಬ್ಬರೇ ಸಮಸ್ಯೆ ಬಗೆ ಹರಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಶಾಸಕರು ಇದ್ದಾರೆ ಅಲ್ಲವೇ, ಅವರೂ ಹೋರಾಟ ಮಾಡಲಿ ಎಂದರು.

ಕುಮಾರಸ್ವಾಮಿಗೆ ಪಿಎಂ ನರೇಂದ್ರ ಮೋದಿಯವರು ಸ್ಪಂದಿಸುತ್ತಾರೆ ಅಲ್ಲವೇ, ಅವರೇ ಹೋಗಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡಿಸಲಿ ಎಂದು ಸವಾಲು ಹಾಕಿದ ಅವರು, ಕುಮಾರಸ್ವಾಮಿ, ಸಿಬಿಐನೂ ನೋಡಿದ್ದಾರೆ ಅಲ್ಲವೆ, ಅವರೇ ಡಿ.ಕೆ. ಶಿವಕುಮಾರ್ ಅವರನ್ನು ರಕ್ಷಣೆ ಮಾಡಲಿ. ಅದು ಬಿಟ್ಟು ಅಂದು ಚನ್ನಪಟ್ಟಣದಲ್ಲಿ ಸಮಾರಂಭ ಮಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿದರು.

Intro:

ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಧಿಕಾರದ ಅವಧಿಯಲ್ಲಿ ಮಂಡ್ಯ ಜನರಿಗೆ ಮೋಸ ಮಾಡಿದ್ದಾರಂತೆ. 14 ತಿಂಗಳ ಅವಧಿ ಜಿಲ್ಲೆಗೆ ಕರಾಳ ಆಡಳಿತವಾಗಿತ್ತು. ಜಿಲ್ಲೆಯ ಜನರಿಗೆ ಮೋಸ ಮಾಡಿದ್ದಾರೆ. ಅವರು ಜಿಲ್ಲೆಗೆ ಏನೂ ಮಾಡಿಲ್ಲ. ಕೇವಲ ಮಂಕು ಬೂದಿ ಎರಚುತ್ತಿದ್ದಾರೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದರು.

ಮಾಧ್ಯಮಗಳ ಜೊತೆ ಮಾತನಾಡಿ, ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡಬಾರದು ಅಂದುಕೊಂಡಿದ್ದೆ. ಆದರೆ ಜಿಲ್ಲೆಯ ಜನರನ್ನು ಮರಳು ಮಾಡುತ್ತಿದ್ದಾರೆ. ಮೋಸ ಮಾಡುತ್ತಿದ್ದಾರೆ. ಹೀಗಾಗಿ ಹೀಗೆ ಹೇಳಬೇಕಾಯಿತು. ಇನ್ನು ಮುಂದೆಯಾದರೂ ಮಂಡ್ಯ ಜನರು ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ಆಳ್ವಿಕೆ ಅವಧಿಯಲ್ಲೇ ಮೈಶುಗರ್, ಪಿಎಸ್ಎಸ್ ಕೆ ಮುಚ್ಚಿದ್ದು. ಈಗ ಸುಳ್ಳು ಹೇಳಿಕೊಂಡು ಜಿಲ್ಲೆಗೆ ಬಂದಿದ್ದಾರೆ. ಜನರನ್ನು ಮರಳು ಮಾಡುತ್ತಿದ್ದಾರೆ. 8 ಸಾವಿರ ಕೋಟಿ ರೂಪಾಯಿ ಕೊಟ್ಟೆ ಅನ್ನುತ್ತಾರೆ. ಹಾಗಾದರೆ ಎಷ್ಟು ಕೆಲಸವಾಗಿದೆ ಅನ್ನೋದನ್ನು ತೋರಿಸಲಿ. ಈಗ ನಡೆಯುತ್ತಿರುವ ಕಾಮಗಾರಿಗಳು ಸಿದ್ದರಾಮಯ್ಯನವರ ಸರ್ಕಾರದ ಆಡಳಿತದ ಅವದಿಯದ್ದು. ಸುಳ್ಳು ಹೇಳಿದರೆ ಜನ ನಂಬೋದಿಲ್ಲ ಎಂದರು.

ಹೌದು ನಾನು ಸಿಎಂ ಯಡಿಯೂರಪ್ಪ ಜೊತೆಯೂ ಚೆನ್ನಾಗಿ ಇದ್ದೇನೆ. ಯೋಗೇಶ್ವರ್ ಜೊತೆಯೂ ಚೆನ್ನಾಗಿ ಇದ್ದೇನೆ. ಅದೇ ರೀತಿ ಜೆಡಿಎಸ್ ನ ಕೆಲ ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದೇನೆ. ರಾತ್ರಿ ಯಡಿಯೂರಪ್ಪ ಮನೆಗೆ ಯಾಕೆ ಹೋಗಲಿ. ಬೇಕಾದರೆ ಬೆಳಗ್ಗೆಯೇ ಹೋಗುತ್ತೇವೆ. ಜಿಲ್ಲೆಯ ಸಮಸ್ಯೆ ಕುರಿತು ಚರ್ಚೆ ಮಾಡುತ್ತೇವೆ. ಕೆಲವು ಕೆಲಸಗಳನ್ನು ಮಾಡಿಸುತ್ತಿದ್ದೇವೆ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಜಿಲ್ಲೆಯಲ್ಲಿ 7 ಜೆಡಿಎಸ್ ಶಾಸಕರನ್ನು ಗೆಲ್ಲಿಸಿದ್ದಾರೆ. ಜಿಲ್ಲೆಯ ಸಮಸ್ಯೆ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ. ಸಮಸ್ಯೆ ಬಗೆಹರಿಯದೇ ಇದ್ದರೆ ವಿಧಾನಸೌಧದಲ್ಲಿ ಧರಣಿ ಮಾಡಲಿ. ಅದು ಬಿಟ್ಟು ಕೆಲಸ ಆಗುತ್ತಿಲ್ಲ ಎಂದು ಕುಳಿತಿದ್ದಾರೆ. ಕುಮಾರಸ್ವಾಮಿಯವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಲ್ಲವೇ ಅವರೂ ಹೋರಾಟ ಮಾಡಲಿ ಎಂದು ಸಲಹೆ ನೀಡಿದರು.

ಮೈಶುಗರ್, ಪಿಎಸ್ ಎಸ್ ಕೆ ಕಾರ್ಖಾನೆ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ಸಿಎಂ ಸೇರಿದಂತೆ ಸಚಿವರನ್ನೂ ಭೇಟಿ ಮಾಡಿ ಗಮನ ಸೆಳೆಯಲಾಗುವುದು. ಸಂಸದರೊಬ್ಬರೇ ಸಮಸ್ಯೆ ಬಗೆ ಹರಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಶಾಸಕರು ಇದ್ದಾರೆ ಅಲ್ಲವೇ, ಅವರೂ ಹೋರಾಟ ಮಾಡಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿಗೆ ಪಿಎಂ ನರೇಂದ್ರ ಮೋದಿಯವರು ಸ್ಪಂಧಿಸುತ್ತಾರೆ ಅಲ್ಲವೇ, ಅವರೇ ಹೋಗಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡಿಸಲಿ ಎಂದು ಸವಾಲು ಹಾಕಿದ ಅವರು, ಕುಮಾರಸ್ವಾಮಿ ಅವರ ಸಿಬಿಐನೂ ನೋಡಿದ್ದಾರೆ ಅಲ್ಲವೆ, ಅವರೇ ಡಿ.ಕೆ. ಶಿವಕುಮಾರ್ ಅವರನ್ನು ರಕ್ಷಣೆ ಮಾಡಲಿ. ಅದು ಬಿಟ್ಟು ಅಂದು ಚನ್ನಪಟ್ಟಣದಲ್ಲಿ ಸಮಾರಂಭ ಮಾಡಿದ್ದರು ಯಾಕೆ ಎಂದು ಪ್ರಶ್ನೆ ಮಾಡಿದರು.

Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.