ETV Bharat / state

ಬಿಜೆಪಿಯರು ಪುಕ್ಕಲರು, ಯಡಿಯೂರಪ್ಪ ಅಸಮರ್ಥ ಸಿಎಂ: ಸಿದ್ದರಾಮಯ್ಯ ಕಿಡಿ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಬಿಜೆಪಿ ಎಂಪಿಗಳು ಮತ್ತು ಸಿಎಂ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯ ಕಿಡಿ
author img

By

Published : Sep 15, 2019, 6:45 PM IST

Updated : Sep 15, 2019, 8:05 PM IST

ಮಂಡ್ಯ: ಬಿಜೆಪಿ ಸಂಸದರು ಪುಕ್ಕಲರು, ಯಡಿಯೂರಪ್ಪ ನಾ ಕಂಡ ಅಸಮರ್ಥ ಸಿಎಂ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.

ಸಿದ್ದರಾಮಯ್ಯ ಕಿಡಿ

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರವಾಹ ಬಂದೋಗಿ ತಿಂಗಳು ಕಳೆದರೂ, ಒಂದೇ ಒಂದು ರೂಪಾಯಿ ಪರಿಹಾರವನ್ನು ಮೋದಿ ಸರ್ಕಾರ ನೀಡಿಲ್ಲ. ನೆರೆ ಹಾನಿಯಿಂದ 37 ಸಾವಿರ ಕೋಟಿ ನಷ್ಟ ಆಗಿದೆ. ಅನುದಾನ ಕೊಡಿ ಅಂತಾ ರಾಜ್ಯ ಸರ್ಕಾರ ಮನವಿ ಮಾಡಿದೆ. ಆದ್ರೆ ಈ ವರದಿಯನ್ನು ಕೇಂದ್ರ ಸರ್ಕಾರ ವಾಪಸ್ ಕಳಿಸಿದೆ ಎಂದರು.

ಸಿದ್ದರಾಮಯ್ಯ ಕಿಡಿ

ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಅವರಿಗೆ ಜವಾಬ್ದಾರಿ ಇಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅಲ್ಲದೆ, ಕರ್ನಾಟಕದ ಇತಿಹಾಸದಲ್ಲಿ ಇಂತಹ ನೆರೆ ಹಾನಿ ಆಗಿರಲಿಲ್ಲ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಭೇಟಿ ನೀಡಬೇಕಿತ್ತು ಎಂದರು.

ಮಂಡ್ಯದವರಿಗೆ ಗಡಸುತನ ಇರಬೇಕಿತ್ತು. ಯಡಿಯೂರಪ್ಪ ಮಂಡ್ಯದವರಾದರೂ ಗಡಸಿಲ್ಲ. ಓರ್ವ ಸಚಿವ, ಸಂಸದ ಯಾರೂ ಮಾತಾಡ್ತಿಲ್ಲ. ಇಂತಹ ಜನದ್ರೋಹಿ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

ಇನ್ನು, ಶಾಸಕರಿಗೆ ಅನುದಾನ ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪಗೆ ರಾಜ್ಯದ ಹಣಕಾಸು ಸ್ಥಿತಿ ಅರ್ಥವಾಗಿಲ್ಲ. ಜನವಿರೋಧಿ ಸರ್ಕಾರ ಈಗಿನ ಕೇಂದ್ರ ಸರ್ಕಾರ. ಬರಗಾಲ, ಪ್ರವಾಹ, ಖರ್ಚು ಮಾಡಿಲ್ಲವೆಂದು ನೀಡಿದ್ದ ಅನುದಾನವನ್ನು ವಾಪಸ್​ ಪಡೆಯುತ್ತಿದೆ. ಎರಡೂ ಸರ್ಕಾರ ರಾಜ್ಯಕ್ಕೆ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಎರಡೂ ಸರ್ಕಾರಗಳಿಗೆ ಬಡವರು, ಜನರ ಬಗ್ಗೆ ಕಾಳಜಿ ಇಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ಜನ ಅಧಿಕಾರ ಹಿಡಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ ಯಾಕೆ ಈ ಪ್ರಶ್ನೆ ಮಾಡುತ್ತಿದ್ದೀರಿ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ ಸಿದ್ದರಾಮಯ್ಯ, ಮೈತ್ರಿ ವಿಚಾರ ಈಗ ನನಗ್ಯಾಕೆ. ಡಿಕೆಶಿಯನ್ನ ಕಾನೂನುಬಾಹಿರವಾಗಿ ಅರೆಸ್ಟ್ ಮಾಡಿದ್ದಾರೆ. ಅದನ್ನ ಖಂಡಿಸಿ ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷದವರೂ ಪ್ರತಿಭಟನೆ ಮಾಡಿದ್ವಿ ಎಂದರು.

ಬಿಜೆಪಿಯವರು ಮತ್ತೆ ಆಪರೇಷನ್ ಕಮಲಕ್ಕೆ ಟ್ರೈ ಮಾಡಿದ್ರು. ಆದರೆ ಈಗ ಕಾಲ ಸರಿ ಇಲ್ಲ ಅಂತಾ ಸುಮ್ಮನಿದ್ದಾರೆ. ನಮ್ಮ ಪಾರ್ಟಿಯಿಂದ ಯಾರೂ ಹೋಗಲ್ಲ. ಡಿಕೆಶಿ ಭೇಟಿಗೆ ದೆಹಲಿಗೆ ಹೋಗಿದ್ದೆ. ಇಡಿಯವರು ಭೇಟಿಗೆ ಅವಕಾಶ ಕೊಡಲಿಲ್ಲ, ಹಾಗಾಗಿ ವಾಪಸ್ ಬಂದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದೇ ವೇಳೆ ಹೆಚ್​ಡಿಕೆಗೆ ಪರೋಕ್ಷ ಟಾಂಗ್ ಕೊಟ್ಟ ಸಿದ್ದರಾಮಯ್ಯ, ಮಂಡ್ಯಕ್ಕೆ 8.5 ಸಾವಿರ ಕೋಟಿ ಬಿಡುಗಡೆಯಾಗಿರುವ ವಿಚಾರ ನನಗೆ ಗೊತ್ತಿಲ್ಲ. ಘೋಷಣೆ ಮಾಡಿದ್ದು ಮಾತ್ರ ಗೊತ್ತು. ಮಂಡ್ಯಕ್ಕೆ ಅಷ್ಟು ಅನುದಾನ ಬಂದಿದ್ದರೇ ನನಗೂ ಖುಷಿ ಎಂದರು.

ಡಿಕೆಶಿ ಬಂಧನ ಖಂಡಿಸಿ ಬೆಂಗಳೂರಲ್ಲಿ ನಡೆದಿದ್ದ ಹೋರಾಟದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಮತ್ತು ಜೆಡಿಎಸ್​ ವರಿಷ್ಠ ಹೆಚ್​ಡಿಡಿ ಭಾಗಿಯಾಗದ ಬಗ್ಗೆ ಕೇಳಿದಾಗ ನೋ ರಿಯಾಕ್ಷನ್ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನಕಾರ ವ್ಯಕ್ತಪಡಿಸಿದರು.

Intro:ಮಂಡ್ಯ: ಬಿಜೆಪಿ ಎಂಪಿಗಳು ಪುಕ್ಕಲರು, ಯಡಿಯೂರಪ್ಪ ನಾ ಕಂಡ ಅಸಮರ್ಥ ಸಿಎಂ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಾಪ್ರವಾರ ನಡೆಸಿದರು.
ಮಂಡ್ಯದಲ್ಲಿ ಮಾದ್ಯಮಗಳ ಜೊತೆ ಮಾತನಾಡಿ, 45 ದಿನ ಆಗಿದೆ ಕರ್ನಾಟಕದಲ್ಲಿ ಪ್ರವಾಹ ಪ್ರಾರಂಭ ಆಗಿ. ಒಂದೇ ಒಂದು ರೂಪಾಯಿ ನೆರವನ್ನು ಮೋದಿ ಸರ್ಕಾರ ನೀಡಿಲ್ಲ. ನೆರೆ ಹಾನಿಯಿಂದ 37 ಸಾವಿರ ಕೋಟಿ ನಷ್ಟ ಆಗಿದೆ. ಅನುದಾನ ಕೊಡಿ ಅಂತಾ ಸರ್ಕಾರ ಮನವಿ ಮಾಡಿದೆ. ಕೇಂದ್ರ ಸರ್ಕಾರ ಅದನ್ನ ವಾಪಸ್ ಕಳಿಸಿದೆ. ರಾಜ್ಯದಲ್ಲಿ 25ಬಿಜೆಪಿ ಸಂಸದರಿದ್ದಾರೆ. ಅವರಿಗೆ ಜವಾಬ್ದಾರಿ ಇಲ್ವ. ಕರ್ನಾಟಕದ ಇತಿಹಾಸದಲ್ಲಿ ಇಂತಹ ನೆರೆ ಹಾನಿ ಆಗಿರಲಿಲ್ಲ. ನರೇಂದ್ರ ಮೋದಿಗೆ ಇಲ್ಲಿಗೆ ಬಂದು ಭೇಟಿ ಮಾಡಬೇಕಿತ್ತು.ಬಿಜೆಪಿ ನಾಯಕರು ಪುಕ್ಕಲರು. ಮೋಸ್ಟ್ ವೀಕೆಸ್ಟ್ ಸಿಎಂ ಯಡಿಯೂರಪ್ಪ ಎಂದರು.
ಮಂಡ್ಯದವರಿಗೆ ಗಡಸು ಇರಬೇಕಿತ್ತು. ಯಡಿಯೂರಪ್ಪ ಮಂಡ್ಯದವರಾದರೂ ಗಡಸಿಲ್ಲ. ಒಬ್ಬ ಮಂತ್ರಿ, ಎಂಪಿ ಯಾರೂ ಮಾತಾಡ್ತಿಲ್ಲ. ಇಂತಹ ಜನದ್ರೋಹಿ ಸರ್ಕಾರ ಹಿಂದೆಂದೂ ನೋಡಿಲ್ಲ ಎಂದರು.
ಶಾಸಕರಿಗೆ ಅನುದಾನ ಕಡಿತ ವಿಚಾರವಾಗಿ ಯಡಿಯೂರಪ್ಪಗೆ ರಾಜ್ಯದ ಹಣಕಾಸು ಅರ್ಥವಾಗಿಲ್ಲ. ಜನವಿರೋಧಿ ಸರ್ಕಾರ ಈಗಿನ ಕೇಂದ್ರ ಸರ್ಕಾರ. ಬರಗಾಲ, ಪ್ರವಾಹ, ಖರ್ಚು ಮಾಡಿಲ್ಲ ಎಂದು ನೀಡಿದ್ದ ಅನುದಾನವನ್ನು ವಾಪಸ್ಸು ಪಡೆಯುತ್ತಿದೆ. ಎರಡೂ ಸರ್ಕಾರ ರಾಜ್ಯಕ್ಕೆ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಎರಡೂ ಸರ್ಕಾರಗಳಿಗೆ ಬಡವರು, ಜನರ ಬಗ್ಗೆ ಕಾಳಜಿ ಇಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ಜನ ಅಧಿಕಾರ ಹಿಡಿದಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ ಯಾಕೇ ಈ ಪ್ರಶ್ನೆ ಮಾಡುತ್ತಿದ್ದೀರಿ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ ಸಿದ್ದರಾಮಯ್ಯ, ಮೈತ್ರಿ ವಿಚಾರ ಈಗ ನನಗ್ಯಾಕೆ. ಡಿಕೆಶಿಯನ್ನ ಕಾನೂನುಬಾಹಿರವಾಗಿ ಅರೆಸ್ಟ್ ಮಾಡಿದ್ದಾರೆ. ಅದನ್ನ ಖಂಡಿಸಿ ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ಪ್ರತಿಭಟನೆ ಮಾಡಿದ್ವು ಅಷ್ಟೇ ಎಂದರು.
ಬಿಜೆಪಿಯವರು ಮತ್ತೆ ಆಪರೇಷನ್ ಕಮಲಕ್ಕೆ ಟ್ರೈ ಮಾಡಿದ್ರು. ಆದರೆ ಈಗ ಕಾಲ ಸರಿ ಇಲ್ಲ ಅಂತಾ ಸುಮ್ಮನಿದ್ದಾರೆ. ನಮ್ಮ ಪಾರ್ಟಿಯಿಂದ ಯಾರೂ ಹೋಗಲ್ಲ. ಡಿಕೆಶಿ ಭೇಟಿಗೆ ದೆಹಲಿಗೆ ಹೋಗಿದ್ದೆ. ಇಡಿಯವರು ಭೇಟಿಗೆ ಅವಕಾಶ ಕೊಡಲಿಲ್ಲ, ವಾಪಸ್ ಬಂದೆ ಎಂದರು.
ಹೆಚ್ಡಿಕೆಗೆ ಸಿದ್ದು ಪರೋಕ್ಷ ಟಾಂಗ್ ಕೊಟ್ಟ ಸಿದ್ದರಾಮಯ್ಯ, ಮಂಡ್ಯಕ್ಕೆ 8.5ಸಾವಿರ ಕೋಟಿ ಬಿಡುಗಡೆಯಾಗಿರುವ ವಿಚಾರ ನನಗೆ ಗೊತ್ತಿಲ್ಲ, ಘೋಷಣೆ ಮಾಡಿದ್ದು ಮಾತ್ರ ಗೊತ್ತು. ಮಂಡ್ಯಕ್ಕೆ ಅಷ್ಟು ಅನುದಾನ ಬಂದಿದ್ದರೇ ನನಗೂ ಖುಷಿ ಎಂದು ಪರೋಕ್ಷವಾಗಿ ಹೆಚ್ಡಿಕೆಗೆ ಕುಟುಕಿದರು.
ಡಿಕೆಶಿ ಬಂಧನ ಖಂಡಿಸಿ ನಡೆದ ಹೋರಾಟದಲ್ಲಿ ಹೆಚ್ಡಿಕೆ, ಹೆಚ್ಡಿಡಿ ಭಾಗಿಯಾಗದ ಬಗ್ಗೆ ನನ್ನದು ನೋ ರಿಯಾಕ್ಷನ್ ಎಂದರು.Body:ಯತೀಶ್ ಬಾಬುConclusion:
Last Updated : Sep 15, 2019, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.