ಮಂಡ್ಯ: ಹಣದ ವಿಷಯಕ್ಕೆ ಅಣ್ಣ-ತಮ್ಮಂದಿರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ನಗರದ ವಿದ್ಯಾನಗರದಲ್ಲಿ ಕಳೆದ ರಾತ್ರಿ (ಶನಿವಾರ) ನಡೆದಿದೆ.
ವಿದ್ಯಾನಗರ ನಿವಾಸಿ ಮಹೇಶ್ (45) ತಮ್ಮನಿಂದ ಕೊಲೆಯಾಗಿರುವ ಅಣ್ಣ. ರೇಣುಕಾ ಪ್ರಸಾದ್ ಕೊಲೆ ಆರೋಪಿ. ಈತ ಖಾಸಗಿ ಸಹಕಾರ ಸಂಘದಲ್ಲಿ ಜಾಮೀನಿನ ಮೇಲೆ ಅಣ್ಣನಿಗೆ ಸಾಲ ಕೊಡಿಸಿದ್ದ. ಈರುಳ್ಳಿ ವ್ಯಾಪಾರ ಮಾಡ್ತಿದ್ದ ಮಹೇಶ್ ನಷ್ಟದಿಂದಾಗಿ ಸಾಲ ಮರುಪಾವತಿ ಮಾಡಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಸಿಟ್ಟಿನಿಂದ ಅಣ್ಣನ ಎದೆಗೆ ತಮ್ಮ ಚಾಕು ಇರಿದು ಪರಾರಿಯಾಗಿದ್ದಾನೆ.
ಇದಾದ ನಂತರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪಶ್ಚಿಮ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಶೆಯಲ್ಲಿ ಕಾರುಗಳ ಗಾಜು ಪುಡಿ-ಪುಡಿ.. ಬೆಂಗಳೂರಲ್ಲಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ