ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಬ್ಬು ಕಡಿಯುವ ವೇಳೆ ಚಿರತೆ ಮರಿ ಪತ್ತೆಯಾಗಿದ್ದು, ಚಿರತೆ ಮರಿಯನ್ನು ತಂದು ಜಮೀನಿನ ರೈತ ಆರೈಕೆ ಮಾಡಿದ್ದಾನೆ. ಜಮೀನಿನಲ್ಲಿ ಸಿಕ್ಕ ಚಿರತೆ ಮರಿ ನೋಡಲು ರೈತನ ಮನೆ ಮುಂದೆ ಜನರು ಜಮಾಯಿಸಿದ್ದಾರೆ.
ಚಿರತೆ ಮರಿ ಪತ್ತೆಯಾದ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ರೈತ ಚಿರತೆ ಮರಿಯನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ.