ಮಂಡ್ಯ: ಕೊಟ್ಟಿಗೆಯಲ್ಲಿದ್ದ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಹೊತ್ತೊಯ್ದ ಘಟನೆ, ಕೆ.ಆರ್. ಪೇಟೆ ತಾಲ್ಲೂಕಿನ ತೆರ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ ಕರುವನ್ನು ಮನೆಯ ಕೊಟಿಗೆಯಲ್ಲಿ ಕಟ್ಟಿ ಹಾಕದ್ದ ವೇಳೆ, ಚಿರತೆ ಹೊತೊಯ್ದಿದೆ. ಕಳೆದ ವಾರ ಗ್ರಾಮದ ನಾಯಿಯೊಂದರ ಮೇಲೂ ದಾಳಿ ಮಾಡಿತ್ತು.
ಚಿರತೆಯ ದಾಳಿ ಕಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದು, ಕೆ.ಆರ್.ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.