ಮಂಡ್ಯ: ಮೇಲುಕೋಟೆ ವೈರಮುಡಿ ಉತ್ಸವದ ಮೇಲೆ ಕೋವಿಡ್- 19 ಕರಿಛಾಯೆ ಬೀರಿದೆ. ಸಾವಿರಾರು ಭಕ್ತರು ಆಗಮಿಸುವ ಉತ್ಸವದ ಆಚರಣೆ ಬೇಕೋ ಬೇಡವೋ ಎನ್ನುವ ತೀರ್ಮಾನ ಜಿಲ್ಲಾಡಳಿತ ಮತ್ತು ಸರ್ಕಾರದ ಮೇಲೆ ನಿಂತಿದೆ.
ಏಪ್ರಿಲ್ 2 ರಂದು ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ನಡೆಯಲಿದೆ. ಉತ್ಸವಕ್ಕಾಗಿ ಜಿಲ್ಲಾಡಳಿತ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಆದರೆ ಕೊರೊನಾ ಭಯ ಜಾತ್ರೆಯ ಮೇಲೆ ಇರುವುದರಿಂದ ಸರ್ಕಾರದ ತೀರ್ಮಾನದ ನಂತರ ಜಾತ್ರೆ ಯಾವ ರೀತಿ ನಡೆಯುತ್ತದೆ ಎಂಬುದು ತಿಳಿಯಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ. ವೆಂಕಟೇಶ್, ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಉತ್ಸವ ಆಚರಣೆ ಮಾಡಬೇಕೆ ಬೇಡವೆ ಎಂಬುದರ ಕುರಿತು ತೀರ್ಮಾನ ಮಾಡಲಿದ್ದಾರೆ ಎಂದಿದ್ದಾರೆ.