ಮಂಡ್ಯ: ನಿಮ್ಮ ಪ್ರತಾಪಕ್ಕೆ ಹೆದರಿ ಓಡಿ ಹೋಗಲು ನಾನು ಸಂಸದೆ ಸುಮಲತಾ ಅಂಬರೀಶ್ ಅಮ್ಮಾ ಅಲ್ಲವೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಪೀಠಾಧಿಪತಿ ಋಷಿಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಠಾಣೆಗೆ ಸಹಿ ಹಾಕಲು ಕಾಳಿ ಮಠದ ಸ್ವಾಮಿ ಇಂದು ಆಗಮಿಸಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನಿಮ್ಮ ಗಣಿಗಾರಿಕೆ ವಿಚಾರಕ್ಕೆ ಬರುವುದಿಲ್ಲ. ಹಾಗಾಗಿ ನೀವು ಹೆದರುವುದು ಬೇಡ ಎಂದು ಹೇಳುವ ಮೂಲಕ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಟಾಂಗ್ ಕೊಟ್ಟರು.
ಋಷಿಕುಮಾರ ಸ್ವಾಮೀಜಿಯೇ ಅಲ್ಲ ಎಂಬ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಕಾಳಿ ಮಠದ ಸ್ವಾಮೀಜಿ, ನಾನು ಸ್ವಾಮೀಜಿ ಅಲ್ಲ ಎಂದು ಹೇಳುವ ಮೂಲಕ ನನಗೆ ಸರ್ಟಿಫಿಕೇಟ್ ಕೊಡುವುದು ಬೇಡ. ಅದರ ಬದಲು ತಮ್ಮ ಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲಿ. ಅವರ ಪ್ರತಾಪಗಳಿಗೆ ಹೆದರಿ ಓಡಿಹೋಗಲ್ಲ ಎಂದು ಗುಡುಗಿದರು.
ಇದನ್ನೂ ಓದಿ: ದಿ. ಮಾದೇಗೌಡ ಬಗ್ಗೆ ಅವಹೇಳನ : ಜೆಡಿಎಸ್ನಿಂದ ಶಿವರಾಮೇಗೌಡ ಉಚ್ಚಾಟನೆ
ಹಿಂದೆ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಸೀದಿಯನ್ನು ಕೆಡವಿ ಮಂದಿರ ಕಟ್ಟಬೇಕು ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಒಂದು ಜೈಲು ವಾಸ ಅನುಭವಿಸಿದರು. ಬಳಿಕ ಕೋರ್ಟ್ನಿಂದ ಜಾಮೀನು ಪಡೆದು ಹೊರಬಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ