ಮಂಡ್ಯ : ಮದುವೆಯಾಗಿ ಸಂಬಂಧಿಕರ ಮನೆಯಲ್ಲಿ ತನ್ನ ಪತ್ನಿಯನ್ನು ಬಿಟ್ಟು ಪತಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆ ಗ್ರಾಮದಲ್ಲಿ ನಡೆದಿದೆ.
ಹುಲಿಗೆರೆಪುರ ತೇಜಸ್ವಿ ಪತ್ನಿಯನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವತಿ ಹಾಗೂ ತೇಜಸ್ವಿ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಹೆಂಡತಿಯನ್ನ ಸಂಬಂಧಿಕರ ಮನೆಯಲ್ಲಿರಿಸಿ ತೇಜಸ್ವಿ ನಾಪತ್ತೆಯಾಗಿದ್ದಾನೆ.
ತನ್ನ ಗಂಡನನ್ನ ಹುಡುಕಿ ಬಂದವಳೀಗ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕುತ್ತಿದ್ದು, ವಂಚನೆಗೊಳಗಾದ ಯುವತಿ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾಳೆ.
ಸದ್ಯ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.