ETV Bharat / state

ಶ್ರೀರಂಗಪಟ್ಟಣದ ರೂಮ್ಸ್‌ ಲಾಡ್ಜ್‌ನಲ್ಲಿ ಯುವತಿಯ ಬರ್ಬರ ಹತ್ಯೆ - ಶ್ರೀರಂಗಪಟ್ಟಣದ ಲಾಡ್ಜ್‌ನಲ್ಲಿ ಯುವತಿಯ ಕೊಲೆ ಸುದ್ದಿ

ಮೈಸೂರು ಮೂಲದ ಯುವತಿಯೋರ್ವಳನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಲಾಡ್ಜ್​​ನಲ್ಲಿ ಭೀಕರವಾಗಿ ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ.

girl-murder-in-lodge
ಯುವತಿಯ ಬರ್ಬರ ಹತ್ಯೆ
author img

By

Published : Jun 17, 2020, 9:54 AM IST

Updated : Jun 17, 2020, 12:40 PM IST

ಮಂಡ್ಯ: ಮೈಸೂರು ಮೂಲದ ಯುವತಿಯನ್ನು ಕರೆತಂದು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣದ 'ರೂಮ್ಸ್ ಲಾಡ್ಜ್' ನಲ್ಲಿ‌ ನಡೆದಿದೆ.

ಶ್ರೀರಂಗಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಈ ಲಾಡ್ಜ್‌ನಲ್ಲಿ ಪತಿ-ಪತ್ನಿಯೆಂದು ಹೇಳಿ ವ್ಯಕ್ತಿಯೊಬ್ಬ ಮಂಗಳವಾರ ಬೆಳಗ್ಗೆ ರೂಮ್ ಬುಕ್ ಮಾಡಿದ್ದಾನೆ. ಬಳಿಕ ಆತ ಕೃತ್ಯ ಎಸಗಿದ್ದು ಮಧ್ಯಾಹ್ನದ ವೇಳೆಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ರಾತ್ರಿಯಾದರೂ ಯುವತಿ ರೂಮ್‌ನಿಂದ ಹೊರ ಬರದೇ ಇದ್ದುದನ್ನು ಗಮನಿಸಿ ಸಿಬ್ಬಂದಿ ರೂಮ್​ ಬಾಗಿಲು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆಯಾದ ಯುವತಿಗೆ ಸುಮಾರು 25 ವರ್ಷ ವಯಸ್ಸೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕೊಲೆಯಾದ ಮತ್ತು ಕೊಲೆಗೈದು ಪರಾರಿಯಾಗಿರುವ ಆರೋಪಿಯ ಮಾಹಿತಿ ಕಲೆ ಹಾಕಲಾಗುತ್ತಿದ್ದಾರೆ.

ಅಕ್ರಮ ಸಂಬಂಧದ ಶಂಕೆ:

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಯುವತಿಯನ್ನು ಸಂಪೂರ್ಣವಾಗಿ ಬೆತ್ತಲು ಮಾಡಿ, ಮನ ಬಂದಂತೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈಯ್ಯಲಾಗಿದೆ. ಹೀಗಾಗಿ ಪರಿಚಿತರೇ ಕೃತ್ಯ ಮಾಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

Last Updated : Jun 17, 2020, 12:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.