ಮಂಡ್ಯ: ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ರಾತ್ರೋರಾತ್ರಿ ಕಳ್ಳತನವಾಗಿರುವ ಘಟನೆ ಜಿಲ್ಲೆಯ ಕೆ.ಆರ್. ಪೇಟೆ ಪಟ್ಟಣದ ಅಗ್ರಹಾರ ಬೀದಿಯಲ್ಲಿ ನಡೆದಿದೆ.
ಮಕ್ಕಳು ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಗಣೇಶ ಮೂರ್ತಿಯನ್ನು ಕೂರಿಸಿದ್ದರು. ನಿತ್ಯ ಮಕ್ಕಳು ಹಾಗೂ ಪೋಷಕರು ಪೂಜೆ ಸಲ್ಲಿಸುತ್ತಿದ್ದರು. ಆದ್ರೆ, ಇಂದು ಮುಂಜಾನೆ 3 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಗಣೇಶ ವಿಗ್ರಹದ ಜತೆಗೆ ಹುಂಡಿಯನ್ನೂ ಹೊತ್ತೊಯ್ದಿದ್ದಾರೆ.
ಗಣಪತಿ ವಿಗ್ರಹ ಕದ್ದೊಯ್ದಿರುವವರಿಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದು, ಹೊಸ ಮೂರ್ತಿಯನ್ನು ಕೂರಿಸುವುದಾಗಿ ಹೇಳಿದ್ದಾರೆ.