ಮಂಡ್ಯ: ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶ, ಹೋರಾಟಗಾರ ಜಿ. ಮಾದೇಗೌಡರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಈ ಕುರಿತು ನಮ್ಮ ಈಟಿವಿ ಬಾರತ ಪ್ರತಿನಿಧಿಯೊಂದಿಗೆ ಜಿ. ಮಾದೇಗೌಡರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ನೀರಿನ ಸಮಸ್ಯೆ ನಿವಾರಣೆಗೆ ಮಳೆಯೇ ಪರಿಹಾರ. ಮಳೆಯ ಆಧಾರದ ಮೇಲೆಯೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಾದೇಗೌಡರು ಹೇಳಿದ್ದಾರೆ.
ಯಾವ ತಿಂಗಳಲ್ಲಿ ಎಷ್ಟು ನೀರು ಬಿಡಬೇಕು ?
ಜೂನ್- 10 TMC
ಜುಲೈ -34TMC
ಆಗಸ್ಟ್ -50TMC
ಸೆಪ್ಟಂಬರ್- 40TMC
ಆಕ್ಟೋಬರ್ -22TMC
ನವೆಂಬರ್ -15TMC
ಡಿಸೆಂಬರ್ -8TMC
ಜನವರಿ -3TMC
ಫೆಬ್ರವರಿ- 2.5TMC
ಮಾರ್ಚ್- 2.5TMC
ಎಪ್ರಿಲ್- 2.5TMC
ಮೇ- 2.5TMC
ಮಂಡಳಿಯ ಆದೇಶಕ್ಕೆ ಕಾರಣವೇನು?
ಕಾವೇರಿ ತೀರ್ಪಿನಲ್ಲಿಯೇ ನ್ಯಾಯಮೂರ್ತಿಗಳು ಕೆಲವೊಂದು ಕಾರ್ಯಯೋಜನೆಯನ್ನು ಮಂಡಳಿಗೆ ನೀಡಿದ್ದಾರೆ. ಅದರಂತೆ ನೀರಿನ ಲಭ್ಯತೆ, ಒಳ ಹರಿವಿನ ಪ್ರಮಾಣ ಹಾಗೂ ಸಂಗ್ರಹ ನೋಡಿಕೊಂಡು ನೀಡಬಹುದಾಗಿದೆ ಎಂದು ಮಾದೇವಗೌಡರು ಹೇಳಿದರು.
ಇನ್ನು ನ್ಯಾಯ ಮಂಡಳಿ ವಿಧಿಸಿರುವ ಷರತ್ತು ಯೋಗ್ಯವಾಗಿದೆ ಕಾವೇರಿ ಹೋರಾಟಗಾರ ಮಾದೇಗೌಡರು ಆದೇಶವನ್ನು ಸ್ವಾಗತಿಸಿದ್ದಾರೆ.