ETV Bharat / state

ಕೊರೊನಾ ವಿಚಾರದಲ್ಲಿ ಮಾಧ್ಯಮಗಳ ವರದಿ ದೂಷಿಸುವುದು ಸರಿಯಲ್ಲ: ಸಿ.ಎಸ್.ಪುಟ್ಟರಾಜು - ಮಂಡ್ಯ ಲೇಟೆಸ್ಟ್ ನ್ಯೂಸ್

ಕೊರೊನಾ ಹರಡುವಿಕೆಯ ವಸ್ತುಸ್ಥಿತಿಯನ್ನು ಮಾಧ್ಯಮಗಳು ಸರಿಯಾಗಿ ತಿಳಿಸುತ್ತಿವೆ. ಮಾಧ್ಯಮಗಳು ಇಲ್ಲವಾಗಿದ್ದರೆ ನಾವು ಎಲ್ಲಿರುತ್ತಿದ್ದೆವೋ ಎಂದು ಊಹಿಸಲೂ ಆಗುತ್ತಿರಲಿಲ್ಲ. ಯಾರೋ ಒಬ್ಬ, ಇಬ್ಬರು ಮಾತಾಡುತ್ತಾರೆ ಎಂದು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ. ಮಾಧ್ಯಮಗಳು ಜನಸಾಮಾನ್ಯರಿಗೆ ಅನೂಕೂಲವಾಗುವ ರೀತಿಯಲ್ಲಿ ಮಾಹಿತಿಗಳನ್ನು ನೀಡುತ್ತಿವೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

Former Minister CS Puttaraju
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
author img

By

Published : Apr 22, 2021, 2:01 PM IST

ಮಂಡ್ಯ: ಕೊರೊನಾ ವಿಚಾರದಲ್ಲಿ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ದೂಷಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಬಗ್ಗೆ ವಾಸ್ತವ ಸ್ಥಿತಿಯನ್ನು ಮಾಧ್ಯಮಗಳು ಸರಿಯಾಗಿ ತಿಳಿಸುತ್ತಿವೆ. ಮಾಧ್ಯಮಗಳು ಇಲ್ಲವಾಗಿದ್ದರೆ ನಾವು ಎಲ್ಲಿರುತ್ತಿದ್ದೆವೋ ಎಂದು ಊಹಿಸಲೂ ಆಗುತ್ತಿರಲಿಲ್ಲ. ಯಾರೋ ಒಬ್ಬ, ಇಬ್ಬರು ಮಾತಾಡುತ್ತಾರೆ ಎಂದು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ. ಮಾಧ್ಯಮಗಳು ಜನಸಾಮಾನ್ಯರಿಗೆ ಅನೂಕೂಲವಾಗುವ ರೀತಿಯಲ್ಲಿ ಮಾಹಿತಿಗಳನ್ನು ನೀಡುತ್ತಿವೆ. ಕೊರೊನಾ ಹತೋಟಿಗೆ ತರಲು ಮಾಧ್ಯಮಗಳು ಸಹಕಾರಿಯಾಗಲಿವೆ. ಕೊರೊನಾ ನೋವನ್ನು ಅನುಭವಿಸಿದವರನ್ನು ಕೇಳಿದ್ರೆ ಗೊತ್ತಾಗುತ್ತೆ. ಉಡಾಫೆ ಮಾಡುವವರ ಮಾತಿಗೆ ಮಾಧ್ಯಮವರು ತಲೆಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಜನರು ನಡುಗಿ ಹೋಗಿದ್ದಾರೆ‌. ಸದ್ಯ ನಿನ್ನೆ ಇದ್ದವರು, ಇವತ್ತು ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಮಾಧ್ಯಮಗಳ ಬಗ್ಗೆ ಯಾರೂ ಹುಡುಗಾಟಿಕೆ ಮಾತು ಆಡಬಾರದು. ಮಾಧ್ಯಮದಲ್ಲಿ ಬರುವ ಮಾಹಿತಿಯನ್ನು ಸರ್ಕಾರ ಗ್ರಹಿಸಿಕೊಂಡು ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ಸರ್ಕಾರ ಈಗ ತಂದಿರುವ ರೂಲ್ಸ್ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅನಿವಾರ್ಯ ಇದ್ರೆ ಲಾಕ್‌ಡೌನ್ ಘೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಓದಿ: ಮೈಸೂರಿಗೆ ತುರ್ತಾಗಿ 3 ಲಕ್ಷ ಲಸಿಕೆ ಅಗತ್ಯ ಇದೆ: ಸಚಿವ ಎಸ್.ಟಿ.ಸೋಮಶೇಖರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.