ಮಂಡ್ಯ: ಬಿಸಿಯೂಟಕ್ಕೆಂದು ಸರ್ಕಾರದಿಂದ ಬರುವ ತೊಗರಿಬೇಳೆಯನ್ನು ಮಾರಾಟ ಮಾಡಲು ಹೋಗಿ ಇಲ್ಲಿಯ ಶಾಲಾ ಮುಖ್ಯ ಶಿಕ್ಷಕನೊಬ್ಬ ಇದೀಗ ಅಮಾನತು ಶಿಕ್ಷೆಗೊಳಗಾಗಿದ್ದಾನೆ. ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಪ್ರೌಢಶಾಲೆಯ ಕಾಳರಾಜೇಗೌಡ ಅಮಾನತುಗೊಂಡ ಮುಖ್ಯ ಶಿಕ್ಷಕ.
ಆರೋಪಿ ಕಾಳರಾಜೇಗೌಡ, ಬಿಸಿಯೂಟದ ತೊಗರಿಬೇಳೆಯನ್ನು ಮಾರಾಟ ಮಾಡುವ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಬಳಿಕ ಕಠಿಣ ಕ್ರಮ ಕೈಗೊಂಡು ಡಿಡಿಪಿಐ ಎಸ್.ಟಿ.ಜವರೇಗೌಡ ಆದೇಶ ಹೊರಡಿಸಿದ್ದಾರೆ.