ETV Bharat / state

ಬೆಂಬಲ ಬೆಲೆ ನೀಡುವಂತೆ ರೈತರ ಆಗ್ರಹ: ಮುಖ್ಯಮಂತ್ರಿ ಪ್ರತಿಮೆಗೆ ರಕ್ತಾಭಿಷೇಕ ಮಾಡಿ ಪ್ರತಿಭಟನೆ - ಬೊಮ್ಮಾಯಿ ಅವರ ಪ್ರತಿಮೆಗೆ ರಕ್ತಾಭಿಷೇಕ

ಮಂಡ್ಯದಲ್ಲಿ ತೀವ್ರಗೊಂಡ ರೈತರ ಹೋರಾಟ - 50ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ - ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿಷೇಕ - ಸರ್ಕಾರದ ವಿರುದ್ಧ ಆಕ್ರೋಶ

protest against CM Basavaraj Bommai
protest against CM Basavaraj Bommai
author img

By

Published : Dec 28, 2022, 5:19 PM IST

Updated : Dec 28, 2022, 6:25 PM IST

ಬೆಂಬಲ ಬೆಲೆ ನೀಡುವಂತೆ ರೈತರ ಆಗ್ರಹ

ಮಂಡ್ಯ: ಕಬ್ಬಿಗೆ ಹಾಗೂ ಹಾಲಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರ ನಡೆಸುತ್ತಿರುವ ಪ್ರತಿಭಟನೆ 50 ದಿನಗಳು ಕಳೆದರೂ ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸಿಸುತ್ತಿಲ್ಲ ಎಂದು ನೂರಾರು ರೈತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆಗೆ ರಕ್ತಾಭಿಷೇಕ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನೂರಾರು ರೈತರು ಕಳೆದ 50 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ವರೆಗೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಂತೆ ನಾವು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೆವು. ಆದರೆ, ಕಳೆದ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾನಿರತ ರೈತರು ತಮ್ಮ ಸಿಟ್ಟನ್ನು ಹೊರ ಹಾಕಿದರು.

protest against CM Basavaraj Bommai
ಬೆಂಬಲ ಬೆಲೆ ನೀಡುವಂತೆ ರೈತರ ಆಗ್ರಹ

ಕಳೆದ 52 ದಿನಗಳಿಂದ ನಾವು ಈ ಹೋರಾಟ ಮಾಡುತ್ತಿದ್ದೇವೆ. ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿರುವ ಮಂತ್ರಿಗಳು, ಸಚಿವರು ಬೆಂಬಲ ಬೆಲೆ ಕೊಡಬಾರದೆಂದು ಹೈಕೋರ್ಟ್​ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಹೀಗಾದರೆ ಬೆಳೆ ಬೆಳೆದ ರೈತರ ಪಾಡು ಏನಾಗಬೇಕು? ಎಂದು ರೈತ ಮುಖಂಡರು ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಸರ್ಕಾರದ ನಡೆ ಖಂಡಿಸಿ ಇಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ 30ಕ್ಕೂ ಹೆಚ್ಚು ರೈತರು, ತಮ್ಮ ಕೈಯಿಂದ ರಕ್ತ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆಗೆ ರಕ್ತಾಭಿಷೇಕ ಮಾಡಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಧರಣಿ ನಿರತರನ್ನು ಬಂಧಿಸಿ, ಹೋರಾಟಕ್ಕಾಗಿ ಹಾಕಿಕೊಂಡಿದ್ದ ಶಾಮಿಯಾನವನ್ನು ಕಿತ್ತು ಹಾಕಿದರು.

ಇದನ್ನು ಓದಿ: ಆರೋಗ್ಯ ಸಚಿವರೇ ಮಾಸ್ಕ್‌ ಧರಿಸುತ್ತಿಲ್ಲ, ಬೇರೆಯವರಿಗೆ ಯಾಕೆ ಹೇಳುತ್ತೀರಿ?: ಡಿ.ಕೆ.ಶಿವಕುಮಾರ್

Last Updated : Dec 28, 2022, 6:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.