ಮಂಡ್ಯ: ಜೆಡಿಎಸ್ ಕಾರ್ಯಾಲಯದಲ್ಲಿ ದಂಪತಿ ನಕಲಿ ಪಾಸ್ ಪೋರ್ಟ್, ವೋಟರ್ ಐಡಿ ಮಾಡಿಕೊಡುತ್ತಿದ್ದ ಪ್ರಕರಣ ಕುರಿತು 'ಈಟಿವಿ ಭಾರತ' ವರದಿ ಮಾಡಿದ ಬೆನ್ನಲ್ಲೇ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂ ಗಾಳಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
![fake voter ID creating couple arrested in mandya](https://etvbharatimages.akamaized.net/etvbharat/prod-images/kn-mnd-01-07-nakali-voter-id-areest-photo-ka10026_01092021160832_0109f_1630492712_949.jpg)
ಇದನ್ನೂ ಓದಿ:ಈ ಪಕ್ಷದ ಕಾರ್ಯಾಲಯದಲ್ಲಿ ನಕಲಿ ಐಡಿ ಪಾಸ್ಪೋರ್ಟ್ ದಂಧೆ ಆರೋಪ: ದಂಪತಿ ವಿರುದ್ಧ ದೂರು
ಮಂಡ್ಯದ ಹೊಳಲು ರಸ್ತೆಯಲ್ಲಿರುವ ಡಿ.ಕೆ. ಹೆಚ್. ಅಸೋಸಿಯೇಟ್ ಹೆಸರಿನ CSC ಕೇಂದ್ರದ ಮೇಲೆ ದಾಳಿ ನಡೆಸಿ ನಕಲಿ ಐಡಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್ಟಾಪ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಫೇಕ್ ಐಡಿ ಮಾಡಿಕೊಡುತ್ತಿದ್ದ ಸಿಎಸ್ಸಿ ಕೇಂದ್ರಕ್ಕೆ ಬೀಗ ಹಾಕಿಸಿದ್ದಾರೆ.
![fake voter ID creating couple arrested in mandya](https://etvbharatimages.akamaized.net/etvbharat/prod-images/kn-mnd-01-07-nakali-voter-id-areest-photo-ka10026_01092021160832_0109f_1630492712_132.jpg)
ತಹಶೀಲ್ದಾರ್ ವರದಿ ಬಳಿಕ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು ನಕಲಿ ವೋಟರ್ ಐಟಿ ಮಾಡಿಕೊಡುತ್ತಿದ್ದ ದಂಪತಿಯಾದ ತೌಸಿಫ್ @ ದಡಕನ್, ಪತ್ನಿ ಹೀನಾ ಕೌಸರ್ ಅವರನ್ನು ಬಂಧಿಸಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ. ಬಂಧಿತರ ವಿರುದ್ಧ IPC 468, 471, 420 IT ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಮಂಗಳವಾರ 'ಈಟಿವಿ ಭಾರತ' ವಿಸ್ತೃತ ವರದಿ ಮಾಡಿತ್ತು. ಈ ವರದಿ ಓದಿ ತಕ್ಷಣ ಕ್ರಮ ಕೈಗೊಂಡಿದ್ದರಿಂದ ಮತ್ತಷ್ಟು ಜನರು ಮೋಸ ಹೋಗುವುದು ತಪ್ಪಿದಂತಾಗಿದೆ. ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ.
![fake voter ID creating couple arrested in mandya](https://etvbharatimages.akamaized.net/etvbharat/prod-images/kn-mnd-01-07-nakali-voter-id-areest-photo-ka10026_01092021160832_0109f_1630492712_1063.jpg)