ETV Bharat / state

ಮಂಡ್ಯದಲ್ಲಿ ಕಾಡಾನೆ ದಾಳಿ: 2 ಲಕ್ಷ ಮೌಲ್ಯದ ಬೆಳೆ ಹಾನಿ

ಲಾಕ್​​ಡೌನ್​​​ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಕಾಡು ಪ್ರಾಣಿಗಳ ಹಾವಳಿ ಮತ್ತಷ್ಟು ತಲೆನೋವಾಗಿದೆ. ಇದೀಗ ಮಂಡ್ಯದ ಮಳವಳ್ಳಿ ಬಳಿಯ ರೈತ ಬೆಳದಿದ್ದ ಮಾವು, ಬಾಳೆ ಬೆಳೆಯನ್ನು ಕಾಡಾನೆಗಳು ದಾಳಿ ಮಾಡಿ ಸಂಪೂರ್ಣ ನಾಶ ಮಾಡಿವೆ.

Elephant attacks on forms : 2 lakhs worth of crop damage
ರೈತನ ತೋಟಕ್ಕೆ ಕಾಡಾನೆ ದಾಳಿ: 2ಲಕ್ಷ ಮೌಲ್ಯದ ಬೆಳೆ ಹಾನಿ
author img

By

Published : May 19, 2020, 10:56 PM IST

ಮಂಡ್ಯ: ಕೊರೊನಾ ನಡುವೆಯೂ ಪರಂಗಿ, ಮಾವು ಬೆಳೆದಿದ್ದ ರೈತನ ತೋಟದಲ್ಲಿ ಕಾಡಾನೆಗಳು ದಾಳಿ ನಡೆಸಿ, ಅಪಾರ ಪ್ರಮಾಣದ ಬೆಳೆಯನ್ನು ಹಾನಿಗೊಳಿಸಿವೆ. ಇಲ್ಲಿನ ಮಳವಳ್ಳಿ ತಾಲೂಕಿನ ಧನಗೂರು ಬಳಿ ರೈತ ಸಾಧಿಕ್ ಪಾಷಾ ಎಂಬುವರ ತೋಟದಲ್ಲಿ ದಾಳಿ ಮಾಡಿರುವ ಕಾಡಾನಗಳ ಹಿಂಡು, ಸುಮಾರು 2 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟುಮಾಡಿವೆ.

ಬಾಳೆ, ಪರಂಗಿ ಹಾಗೂ ಮಾವಿನ ಗಿಡಗಳನ್ನು ನಾಶ ಮಾಡಿವೆ. ಕೊಯ್ಲಿಗೆ ಬಂದಿದ್ದ ಪಪ್ಪಾಯಿ ಹಾಗೂ ಬಾಳೆ ಸಂಪೂರ್ಣ ನಾಶವಾಗಿವೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ರೈತನಿಗೆ ಪರಿಹಾರದ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.