ಮಂಡ್ಯ: ರೈತರ ಜಮೀನು ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡಿದ ಒಂಟಿ ಸಲಗ, ಎರಡು ಹಸು ಹಾಗೂ ಒಂದು ಎಮ್ಮೆಯನ್ನು ಬಲಿ ತೆಗೆದುಕೊಂಡ ಘಟನೆ ಮಳವಳ್ಳಿ ತಾಲೂಕಿನ ದೇವಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಳಗ್ಗೆಯಿಂದಲೇ ಗ್ರಾಮದ ಹೊರವಲಯದಲ್ಲಿ ಬೀಡು ಬಿಟ್ಟಿರುವ ಒಂಟಿ ಸಲಗ, ಅಡ್ಡಲಾಗಿ ಬಂದ ಬೈಕ್ ಸವಾರನ ಮೇಲೆ ಮೊದಲು ದಾಳಿ ಮಾಡಿದೆ. ನಂತರ ಎತ್ತಿನ ಗಾಡಿ ಮೇಲೆ ದಾಳಿ ಮಾಡಿ ಎತ್ತುಗಳನ್ನು ಕೊಂದು ಹಾಕಿದೆ. ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಂತರ ಗ್ರಾಮದ ಹೊರವಲಯದಲ್ಲಿ ಮೇಯುತ್ತಿದ್ದ ಎಮ್ಮೆ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದು, ಆನೆಯನ್ನು ಕಾಡಿಗೆ ಓಡಿಸಲು ಪ್ರಯತ್ನ ಪಡುತ್ತಿದ್ದಾರೆ.