ETV Bharat / state

ಮಂಡ್ಯ: ರಂಗ ಸ್ಥಳದಲ್ಲೇ ಕುಸಿದುಬಿದ್ದು ಬದುಕಿನ ಪಾತ್ರವನ್ನೂ ಮುಗಿಸಿದ ಕಲಾವಿದ! - ಕೃಷ್ಣ ಸಂಧಾನ ನಾಟಕ ಪ್ರದರ್ಶನ

ರಂಗದಲ್ಲೇ ಕುಸಿದು‌ ನಾಟಕ ಕಲಾವಿದರೊಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.

Drama artist died
ನಂಜಯ್ಯ-ಕಲಾವಿದ
author img

By

Published : Jan 8, 2023, 12:05 PM IST

Updated : Jan 8, 2023, 12:22 PM IST

ರಂಗಸ್ಥಳದಲ್ಲಿ ಕುಸಿದು ಬಿದ್ದು ಪಾತ್ರಧಾರಿ ಸಾವು

ಮಂಡ್ಯ: ನಾಟಕ ನಡೆಯುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಕಲಾವಿದನೋರ್ವ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದಲ್ಲಿ ನಡೆದಿದೆ. ನಂಜಯ್ಯ (46) ಮೃತ ಕಲಾವಿದರು. ಗ್ರಾಮದ ಬಸವನಗುಡಿಯಲ್ಲಿ ನಡೆದ ನಾಟಕದ ಸಂದರ್ಭದಲ್ಲಿ ಘಟನೆ ಸಂಭವಿಸಿತು.

ಕುರುಕ್ಷೇತ್ರದ 'ಕೃಷ್ಣ ಸಂಧಾನ' ನಾಟಕ ಪ್ರದರ್ಶನದಲ್ಲಿ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ನಂಜಯ್ಯ ವೇದಿಕೆಯ ಮೇಲೆಯೇ ಕೊನೆಯುಸಿರೆಳೆದರು. ಘಟನೆಯ ಬಳಿಕ ಸಹಕಲಾವಿದರು ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು ಸೇರಿಕೊಂಡು ಪೌರಾಣಿಕ ನಾಟಕ ಆಯೋಜಿಸಿದ್ದರು. ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದಲ್ಲಿ ಸೈಂಧವ ಮತ್ತು ಸಾರ್ಥಕಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿ ನಟನೆ ಮಾಡುವಾಗ ವೇದಿಕೆಯಲ್ಲೇ ಅವರಿಗೆ ಹೃದಯಾಘಾತ ಉಂಟಾಗಿದೆ ಎಂದು ಸಹ ಕಲಾವಿದರು ತಿಳಿಸಿದ್ದಾರೆ.

ಕಲಾವಿದ ನಂಜಯ್ಯ ಕುಸಿದು ಬೀಳುತ್ತಿದ್ದಂತೆ ಕೂಡಲೇ ಅಲ್ಲಿದ್ದ ಜನರು ಮಳವಳ್ಳಿ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಕಲಾವಿದ ವೇದಿಕೆಯಲ್ಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನಂಜಯ್ಯ ವೇದಿಕೆಯಲ್ಲಿ ಹೃದಯಾಘಾತವಾಗಿ ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗುತ್ತಿದೆ. ಪತಿಯ ಸಾವಿನ ಕೊನೆ ಕ್ಷಣವನ್ನು ಕಂಡ ಪತ್ನಿ, ಮಗಳು ಹಾಗೂ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಇದನ್ನೂ ಓದಿ: ರೋಸ್​ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಲೇ ಕುಸಿದು ಬಿದ್ದು ಮೃತಪಟ್ಟ ಯುವತಿ!-ವಿಡಿಯೋ

Last Updated : Jan 8, 2023, 12:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.