ಮಂಡ್ಯ: ಲೀಥಿಯಂ ಅಪರೂಪದ ನಿಕ್ಷೇಪ. ಎಲೆಕ್ಟ್ರಾನಿಕ್ ವಾಹನ ಉದ್ಯಮಕ್ಕೆ ಅದು ಚಿನ್ನ. ದೇಶದಲ್ಲಿ ಮೊದಲ ಬಾರಿಗೆ ಸಕ್ಕರೆ ಜಿಲ್ಲೆಯಲ್ಲಿ ಇದು ಪತ್ತೆಯಾಗಿದೆ.
ಲೀಥಿಯಂ ಹಾಗೂ ಸ್ಪೋಡುಮೆನೆ ನಿಕ್ಷೇಪ ಪತ್ತೆಯಾದ ಸ್ಥಳ ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣದ ಗೋಮಳಕ್ಕೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ತಹಶಿಲ್ದಾರ್ ರೂಪ ಅವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಸ್ಥಳದಲ್ಲಿದ ವಿಜ್ಞಾನಿ ರಾಜೇಶ್ ಅವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಈ ಸ್ಥಳದಲ್ಲಿ ದೊರೆಯುವ ಸ್ಥಳದಲ್ಲಿ ಸ್ಪೋಡುಮೆನೆ ಹಾಗೂ ಲೀಥಿಯಂ ನಿಕ್ಷೇಪದ ಕುರಿತು ತಿಳಿಸಿದರು.
ಪ್ರಸ್ತುತ ಸ್ಥಳವು ಭಾರತ ಸರ್ಕಾರದಡಿ ಬರುವ ಪರಮಾಣು ಶಕ್ತಿ ಇಲಾಖೆಗೆ ಸೇರಿದ್ದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.