ಮಂಡ್ಯ: ಕಾರ್ಖಾನೆಯ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವಿಗೀಡಾದ ಘಟನೆ ಮದ್ದೂರು ತಾಲ್ಲೂಕಿನ ಕೊಪ್ಪ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ.
ಹಾಸನ ಮೂಲದ ಚನ್ನಕೇಶವ(43) ಮೃತಪಟ್ಟ ಕಾರ್ಮಿಕ. ಕೆಲಸ ಮಾಡುತ್ತಿದ್ದ ವೇಳೆ ಯಂತ್ರ ಬಡಿದು ಅವಘಡ ಸಂಭವಿಸಿದೆ. ಕಾರ್ಯಾಚರಣೆ ವೇಳೆ ಯಂತ್ರ ಕೆಟ್ಟು ಹೋಗಿದೆ. ಅದರ ರಿಪೇರಿ ವೇಳೆ ಅಚಾನಕ್ಕಾಗಿ ಯಂತ್ರ ಚಾಲನೆಗೊಂಡು ಚನ್ನಕೇಶವ ಅವರಿಗೆ ಬಡಿದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗಿದೆ ಸಾವಿಗೀಡಾಗಿದ್ದಾರೆ.
ಇನ್ನು ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು, ಈ ಕುರಿತು ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.