ಮಂಡ್ಯ: ಹಲವಾರು ವರ್ಷಗಳ ಹೋರಾಟದ ಫಲವಾಗಿ ಬಂದಿರುವ ಭಾಗ್ಯ ಇದು. ಹೀಗಾಗಿ ರಾಮ ಮಂದಿರ ನಿರ್ಮಾಣ ಮಾಡಲು ದೇಣಿಗೆ ಪಡೆಯಲಾಗುತ್ತಿದೆ. ಈ ಬಗ್ಗೆ ಅನುಮಾನ ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆ ಆರೋಪಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ ಕುಟುಕಿದ್ದಾರೆ.
ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ರಾಮನ ಬಗ್ಗೆ ಅಪಾರ ಭಕ್ತಿ, ಗೌರವ ಇದೆ. ಯಾರಿಗೇ ಆಗಲಿ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಣ್ಣ ಕಾಣಿಕೆ ಅರ್ಪಣೆ ಮಾಡುವ ಬಯಕೆ ಇರುತ್ತದೆ.
ಸ್ವಇಚ್ಛೆಯಿಂದ ದಾನ ಮಾಡುವುದಕ್ಕೆ ಮುಂದೆ ಬರುತ್ತಿದ್ದಾರೆ. 10 ರೂಪಾಯಿಯಿಂದ ಸಾಮಾರ್ಥ್ಯ ಇರುವರೆಗೆ ಕೊಡುವ ಅವಕಾಶವಿದೆ. ಹಾಗಾಗಿ ಇಲ್ಲಿ ಒತ್ತಾಯ ಮಾಡುವ ಪ್ರಶ್ನೆ ಇಲ್ಲ. ಕುಮಾರಸ್ವಾಮಿ ಹೇಳಿಕೆ ಸೂಕ್ತವಲ್ಲ, ಮುಂದಿನ ದಿನಗಳಲ್ಲಿ ಪಕ್ಕಾ ಲೆಕ್ಕ ಕೊಡುತ್ತೇವೆ ಎಂದಿದ್ದಾರೆ.