ಮಂಡ್ಯ: ಹಿರಿಯ ರಾಜಕೀಯ ಹಿರಿಯ ಮುತ್ಸದ್ಧಿ ಹಾಗೂ ಮಾಜಿ ಸಂಸದ ಜಿ. ಮಾದೇಗೌಡರ ಅಗಲಿಕೆಗೆ ಹನ್ನೊಂದು ದಿನಗಳಾಗಿವೆ. ಅಗಲಿಕೆಯ ನೋವಲ್ಲಿಯೇ ಕುಟುಂಬ ಹಾಗೂ ಅಭಿಮಾನಿಗಳು ಪುಣ್ಯತಿಥಿ ನಡೆಸಿದರು.
ಮದ್ದೂರಿನ ಹನುಮಂತ ನಗರದಲ್ಲಿ ಮಾದೇಗೌಡರ ಹಿರಿಯ ಮಗ ಪ್ರಕಾಶ್ ಅವರು ಅಗಲಿದ ತಮ್ಮ ತಂದೆ ಪುಣ್ಯತಿಥಿ ಕಾರ್ಯದ ಪೂಜೆ ಸಲ್ಲಿಸಿದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪಾಲ್ಗೊಂಡು ಸಮಾಧಿಗೆ ಹಾಲು ತುಪ್ಪ ಬಿಡುವ ಮೂಲಕ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಮಾಜಿ ಸಚಿವ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಮಾದೇಗೌಡರ ಪುತ್ರ ಮಧು ಮಾದೇಗೌಡ, ಪ್ರದೇಶ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ, ಗುರುಚರಣ್ ಮತ್ತಿತರರು ಭಾಗವಹಿಸಿದ್ದರು.
ಮದ್ದೂರು ವಡೆ ಸವಿದ ಡಿಕೆಶಿ
ಜಿ. ಮಾದೇಗೌಡರ ಪುಣ್ಯತಿಥಿ ಕಾರ್ಯಕ್ರಮ ಮುಗಿಸಿಕೊಂಡು ಮಳವಳ್ಳಿಯಿಂದ ಬೆಂಗಳೂರಿಗೆ ಹೋಗುವಾಗ ಡಿಕೆ ಶಿವಕುಮಾರ್ ಮಾರ್ಗ ಮಧ್ಯ ಗಾಡಿನಿಲ್ಲಿಸಿ ಮದ್ದೂರು ವಡೆ ಸವಿದಿದ್ದಾರೆ.
![D K Shivakumar](https://etvbharatimages.akamaized.net/etvbharat/prod-images/kn-mnd-28-04-maddur-vadesavida-dks-av-ka10026_28072021185615_2807f_1627478775_498.jpg)
ಡಿಕೆಶಿ ಅವರಿಗೆ ಆಹಾರ ಪದಾರ್ಥಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಕುರುಕಲು ತಿಂಡಿಗಳು ಎಂದರೆ ಪಂಚಪ್ರಾಣ. ಹೀಗಾಗಿ ಅವರು ಮಾರ್ಗ ಮಧ್ಯದಲ್ಲಿ ಸಿಗುವ ಅಂಗಡಿಯಲ್ಲಿ ಮದ್ದೂರು ವಡೆಯ ರುಚಿ ಸವಿದಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡರು ಸಹ ಅವರೊಂದಿಗೆ ಇದ್ದರು.
ಓದಿ: ನಾಳೆ ಉತ್ತರಕನ್ನಡ ಜಿಲ್ಲೆಗೆ ಸಿಎಂ ಬೊಮ್ಮಾಯಿ ಪ್ರವಾಸ: ಪ್ರವಾಹ ಪರಿಸ್ಥಿತಿ ಪರಿಶೀಲನೆ