ETV Bharat / state

ಸರ್ಕಾರದ ಆದೇಶ ಮೀರಿ ಶಾಲಾ ತರಗತಿ ಪ್ರಾರಂಭ: ಫೀಸ್​​ ಕಟ್ಟದ ಮಕ್ಕಳನ್ನು ಹೊರಗೆ ನಿಲ್ಲಿಸಿದ ಶಾಲಾ ಮಂಡಳಿ - ಫೀಜ್​

ಶ್ರೀರಂಗಪಟ್ಟಣ ತಾಲೂಕಿನ ಕೇಂಬ್ರಿಡ್ಜ್​ ಪಬ್ಲಿಕ್ ಶಾಲೆಯಲ್ಲಿ ಫೀಸ್​ ಕಟ್ಟದ ಮಕ್ಕಳನ್ನ ತರಗತಿ ಹೊರಗೆ ನಿಲ್ಲಿಸಿರುವ ಅಮಾನವೀಯ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

Cambridge Public School
ಕೇಂಬ್ರಿಡ್ಜ್​ ಪಬ್ಲಿಕ್ ಶಾಲೆ
author img

By

Published : Mar 16, 2021, 2:00 PM IST

ಮಂಡ್ಯ: ಸರ್ಕಾರದ ಆದೇಶವನ್ನು ಗಾಳಿಗೆ ತೂರಿ 1 ರಿಂದ 6ನೇ ತರಗತಿ ಮಕ್ಕಳಿಗೆ ತರಗತಿ ಪ್ರಾಂಭಿಸಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೇಂಬ್ರಿಡ್ಜ್​ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಶಾಲೆಯಲ್ಲಿ ಫೀಜ್ ಕಟ್ಟದ್ದಕ್ಕೆ ಮಕ್ಕಳನ್ನ ತರಗತಿ ಹೊರಗೆ ನಿಲ್ಲಿಸಿ ಅಮಾನವೀಯ ವರ್ತನೆ ಮಾಡಿದ್ದು, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇನ್ನೂ ಈ ಖಾಸಗಿ ಶಾಲೆಯಲ್ಲಿ ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದೆ. ಫೀಸ್​​ ಕಟ್ಟದ ಮಕ್ಕಳಿಗೆ ಪರೀಕ್ಷೆ ಬರೆಯಲು ಕೊಡದೇ ತರಗತಿ ಹೊರಗೆ ನಿಲ್ಲಿಸಿ ಅಮಾನವೀಯ ವರ್ತನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೇಂಬ್ರಿಡ್ಜ್​ ಪಬ್ಲಿಕ್ ಶಾಲೆ

ಪ್ರೌಢಶಾಲಾ ಮತ್ತು ಪ್ರಾಥಮಿಕ ಹಂತದ ಮಕ್ಕಳಿಗೆ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಶಾಲಾ ಮಂಡಳಿ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. 1 ರಿಂದ 6ನೇ ತರಗತಿ ಮಕ್ಕಳಿಗೂ ಫೀಸ್​ ಪಾವತಿಸುವಂತೆ ಒತ್ತಾಯ ಮಾಡಿದ್ದು, ಆಡಳಿತ ಮಂಡಳಿ ಹಾಗೂ ಶಿಕ್ಷಣ ಸಚಿವರ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.