ಮಂಡ್ಯ: ಕೆಆರ್ಎಸ್ನಿಂದ ಕಾವೇರಿ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಡುತ್ತಿರುವ ಹಿನ್ನೆಲೆ ಮಳವಳ್ಳಿಯ ಗಗನಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ. ಹಾಲ್ನೊರೆಯಂತೆ ದುಮ್ಮಿಕ್ಕುತ್ತಿದೆ. ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಕೆಆರ್ಎಸ್ನಿಂದ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಬಿಡುತ್ತಿರುವ ಹಿನ್ನೆಲೆ ಜಲಪಾತಕ್ಕೆ ಜೀವಕಳೆ ಬಂದಿದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಜಲಪಾತವೀಗ ಕಳೆದೊಂದು ವಾರದಿಂದ ಸುರಿದ ಮಳೆಗೆ ತುಂಬಿಕೊಂಡಿದೆ. ಅಲ್ಲದೇ ಸುತ್ತಲೂ ಹಸಿರ ಹೊದ್ದು, ಮಧ್ಯದಲ್ಲಿ ಧರೆಗೆ ಧುಮುಕುವ ಜಲಪಾತ ರಮಣೀಯ ಅನುಭವ ನೀಡುತ್ತಿದೆ.
ಓದಿ: ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜೋಗದ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು