ಮಂಡ್ಯ: ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಹೇಮಂತ್‍ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಕಾರು, ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ. ಅಶ್ವಿನಿ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಗೆಜ್ಜಲಗೆರೆ ಗ್ರಾಮದ ಜಿ.ಪಿ. ಇಂದುಕುಮಾರ್, ಪ್ರಸಾದ್, ಎಂ.ಎಸ್. ಸ್ವರೂಪ್ ಗೌಡ, ಚನ್ನಪಟ್ಟಣ ತಾಲೂಕಿನ ಮುದಗೆರೆ ಗ್ರಾಮದ ಮಧು, ನಾಗರಾಜು, ಜಿ.ಎನ್. ಮಹದೇವ, ಬಿಳಿಕೆರೆ ಗ್ರಾಮದ ಅವಿನಾಶ್ ಬಂಧಿತ ಆರೋಪಿಗಳು. ಹೇಮಂತ್‌ಕುಮಾರ್ ಮತ್ತು ಇಂದುಕುಮಾರ್‌ಗೆ ಕೆಎಂಎಫ್ ಹಾಲಿನ ಡೈರಿಯ ವಾಹನ ಟೆಂಡರ್ ವಿಚಾರ ಹಾಗೂ ಕ್ರಿಕೆಟ್ ಪಂದ್ಯಾವಳಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಈ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿದ್ದಾರೆ.
ಓದಿ:ಕೋವಿಡ್ ಮರಣ ಮೃದಂಗ - ವಿದ್ಯುತ್ ಚಿತಾಗಾರಗಳಲ್ಲಿ ಹೆಚ್ಚಿದ ಕೆಲಸದೊತ್ತಡ
ಮೇ 10 ರಂದು ರಾತ್ರಿ ಹೇಮಂತ್‌ಕುಮಾರ್, ಆತನ ಸ್ನೇಹಿತ ಸುನೀಲ್‌ನೊಂದಿಗೆ ಗೆಜ್ಜಲಗೆರೆ ಡೈರಿ ಬಳಿ ಕ್ಯಾಂಟರ್ ನೋಡಲು ಹೋಗುತ್ತಿದ್ದಾಗ ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆಸಿದ್ದಾರೆ. ನಂತರ ಇಂದುಕುಮಾರ್ ಮತ್ತು ಸ್ನೇಹಿತರು ಲಾಂಗ್‌ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸುನೀಲ್‌ಕುಮಾರ್‌ಗೆ ಗಂಭೀರ ಗಾಯಗಳಾಗಿದ್ದವು ಎಂದು ಪ್ರಕರಣದ ಬಗ್ಗೆ ಎಸ್ಪಿ ಮಾಹಿತಿ ನೀಡಿದ್ದಾರೆ.