ಮಂಡ್ಯ: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ ಸಂಕಷ್ಟ ಎದುರಿಸುತ್ತಿರುವ ನಿರೂಪಕಿ-ನಟಿ ಅನುಶ್ರೀ ಶ್ರೀರಂಗಪಟ್ಟಣದ ನಿಮಿಷಾಂಭ ದೇವಿಯ ಮೊರೆ ಹೋಗಿದ್ದಾರೆ.
ಸಿಸಿಬಿ ವಿಚಾರಣೆ ಬಳಿಕ ತಾನು ಅನುಭವಿಸುತ್ತಿರುವ ನೋವು ಹೊರಹಾಕಿದ ಅನುಶ್ರೀ
ಅನುಶ್ರೀ ಹಾಗೂ ಕುಟುಂಬಸ್ಥರು ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬೆಳಗ್ಗೆ ದೇವಿ ಸನ್ನಿಧಾನಕ್ಕೆ ಬಂದು ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಕಾವೇರಿ ನದಿಗೆ ತೆರಳಿ ಪೂಜೆ ಸಲ್ಲಿಸಿದರು. ಡ್ರಗ್ಸ್ ಆರೋಪ ಪ್ರಕರಣದಲ್ಲಿ ಇತ್ತೀಚೆಗೆ ವಿಚಾರಣೆ ಎದುರಿಸಿದ್ದ ಅನುಶ್ರೀ ದೇವಾಲಯಕ್ಕೆ ಭೇಟಿ ನೀಡಿದ್ದು ವಿಶೇಷವಾಗಿದೆ.