ETV Bharat / state

ಮಂಡ್ಯ: ಮೊರಾರ್ಜಿ ದೇಸಾಯಿ ಶಾಲೆಯ 23 ವಿದ್ಯಾರ್ಥಿಗಳು ಗುಣಮುಖ - mandya corona

ಮೊರಾರ್ಜಿ ದೇಸಾಯಿ ವಸತಿ ಶಾಲೆಯ 23 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಕೊರೊನಾದಿಂದ ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಮೊರಾರ್ಜಿ ದೇಸಾಯಿ ಶಾಲೆ
ಮೊರಾರ್ಜಿ ದೇಸಾಯಿ ಶಾಲೆ
author img

By

Published : Apr 9, 2021, 2:51 PM IST

ಮಂಡ್ಯ: ಕೊರೊನಾ ಸೋಂಕಿಗೆ ಒಳಗಾಗಿದ್ದ ಶ್ರೀರಂಗಪಟ್ಟಣದ ಮೊರಾರ್ಜಿ ದೇಸಾಯಿ ಶಾಲೆಯ 23 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಮಂಡ್ಯದ ಮೊರಾರ್ಜಿ ದೇಸಾಯಿ ಶಾಲೆ

ಶ್ರೀರಂಗಪಟ್ಟಣದ ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 23 ವಿದ್ಯಾರ್ಥಿಗಳಿಗೆ ಏ.3 ರಂದು ಆರೋಗ್ಯ ಇಲಾಖೆ ಕೋವಿಡ್​-19 ಟೆಸ್ಟ್​ ನಡೆಸಿದ ವೇಳೆ ಸೋಂಕು ದೃಢಪಟ್ಟಿತ್ತು. ಹಾಗಾಗಿ ಅವರನ್ನು ಮಂಡ್ಯದ ಒಕ್ಕಲಿಗರ ಭವನದಲ್ಲಿ ಚಿಕಿತ್ಸೆಗೆ ದಾಖಲಾಗಿತ್ತು. ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡಿ ಅವರವರ ಮನೆಗಳಿಗೆ ಕಳುಹಿಸಿಕೊಟ್ಟಿದ್ದಾರೆ.

ಇನ್ನು ವಸತಿ ಶಾಲೆಗೆ ಸ್ಯಾನಿಟೈಸರ್​ ಮಾಡುವ ಜೊತೆಗೆ ಸ್ವಚ್ಛಗೊಳಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ, ಬಳಿಕ ವಿದ್ಯಾರ್ಥಿಗಳಿಗೆ ರಜೆ ನೀಡಿ ಮನೆಗೆ ಕಳುಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.