ETV Bharat / state

ಚಿರತೆ ದಾಳಿಗೆ ಯುವಕ ಬಲಿ: ಪರಿಹಾರದ ಭರವಸೆ ಬಳಿಕ ಶವ ಪಡೆದ ಕುಟುಂಬಸ್ಥರು.. - ಆರ್​ಎಫ್​​ಓ ಶಿವರಾಜ ಮೇಟಿ ಮೃತನ ಕುಟುಂಬಕ್ಕೆ ಸಮಾಧಾನ

ತಾಲೂಕಿನ ಆನೆಗೊಂದಿ ಸಮೀಪದ ಮೇಗೋಟೆ ದುರ್ಗಾದೇವಿ ಸನ್ನಿಧಾನದಲ್ಲಿ, ಹುಲುಗೇಶ (23) ಎಂಬ ಯುವಕನ ಮೇಲೆ ದಾಳಿ ಮಾಡಿದ್ದ ಚಿರತೆ, ಎಳೆದುಕೊಂಡು ಹೋಗಿ ತಿಂದು ಹಾಕಿತ್ತು.ಶವದ ಮರಣೋತ್ತರ ಪರೀಕ್ಷೆಯ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಶವ ಪಡೆಯುವುದಿಲ್ಲ ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಪಟ್ಟು ಹಿಡಿದಿದ್ದರು.

Young victim of leopard attack Compensation_Promis gangavati
ಪರಿಹಾರದ ಭರವಸೆ ಬಳಿಕ ಶವ ಪಡೆದ ಕುಟುಂಬಸ್ಥರು
author img

By

Published : Nov 5, 2020, 8:42 PM IST

ಗಂಗಾವತಿ: ಮೃತನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಏಳುವರೆ ಲಕ್ಷ ರೂಪಾಯಿ ಮೊತ್ತದ ಪರಿಹಾರ ಸಿಗಲಿದ್ದು, ತಾತ್ಕಾಲಿಕ ಮೊದಲ ಹಂತದಲ್ಲಿ ಎರಡು ಲಕ್ಷ ನೀಡಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳಿದ ಬಳಿಕ ಚಿರತೆ ದಾಳಿಯಿಂದ ಮೃತಪಟ್ಟ ಯುವಕನ ಶವವನ್ನು ಕುಟುಂಬಸ್ಥರು ಪಡೆದುಕೊಂಡಿದ್ದಾರೆ.

ತಾಲೂಕಿನ ಆನೆಗೊಂದಿ ಸಮೀಪದ ಮೇಗೋಟೆ ದುರ್ಗಾದೇವಿ ಸನ್ನಿಧಾನದಲ್ಲಿ, ಹುಲುಗೇಶ (23) ಎಂಬ ಯುವಕನ ಮೇಲೆ ದಾಳಿ ಮಾಡಿದ್ದ ಚಿರತೆ, ಎಳೆದುಕೊಂಡು ಹೋಗಿ ತಿಂದು ಹಾಕಿತ್ತು.
ಶವದ ಮರಣೋತ್ತರ ಪರೀಕ್ಷೆಯ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಶವ ಪಡೆಯುವುದಿಲ್ಲ ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ಆರ್​ಎಫ್​​ಓ ಶಿವರಾಜ ಮೇಟಿ ಮೃತನ ಕುಟುಂಬಕ್ಕೆ ಸಮಾಧಾನ ಹೇಳಿದರು.

ಮೊದಲ ಹಂತವಾಗಿ ಎರಡು ಲಕ್ಷ ರೂಪಾಯಿ ತಕ್ಷಣದ ಪರಿಹಾರ ನೀಡಲಾಗುತ್ತಿದ್ದು, ಇನ್ನುಳಿದ ಹಣ ನೇರವಾಗಿ ಮೃತನ ಸಂಬಂಧಿಕರ ಖಾತೆಗೆ ಜಮೆಯಾಗಲಿದೆ. ಒಟ್ಟು ಏಳುವರೆ ಲಕ್ಷ ರೂಪಾಯಿ ಮೊತ್ತದ ಹಣ ಸಿಗಲಿದೆ. ಆದಷ್ಟು ತ್ವರಿತವಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.