ಗಂಗಾವತಿ: ಹತ್ತನೇ ತರಗತಿಯ ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿಯಾಗಿ ನಿಯೋಜನೆಯಾಗಿದ್ದ ತನ್ನ ತಾಯಿಯನ್ನು ಕರೆದೊಯ್ಯುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ. ಪರಿಣಾಮ, ಮಗ ತೀವ್ರ ಗಾಯಗೊಂಡು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಶ್ರೀರಾಮನಗರದಲ್ಲಿ ನಡೆದಿದೆ. ಮೃತನನ್ನು ಗಂಗಾವತಿ ಒಂದನೇ ವಾರ್ಡ್ನ ನಿವಾಸಿ ಡ್ಯಾನಿಯಲ್ ಸರ್ವೋತ್ತಮ ಮಹೇಶ (21) ಹಾಗೂ ಗಂಭೀರ ಸ್ವರೂಪದ ಗಾಯಕ್ಕೀಡಾದ ಮಹಿಳೆಯನ್ನು ಶ್ರೀರಾಮನಗರದ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸರೋಜಿನಿ ಮಹೇಶ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಪ.ಬಂಗಾಳದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸಾವು: ಟಿಎಂಸಿ ಮುಖಂಡನ ಪುತ್ರ ಅರೆಸ್ಟ್