ETV Bharat / state

ಯಶೋಮಾರ್ಗ ಫೌಂಡೇಶನ್ ಕಾರ್ಯಕ್ಕೆ ಯಶ : ತುಂಬಿ ಹರಿದ ತಲ್ಲೂರು ಕೆರೆ - 14 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ

2016 ರಲ್ಲಿ ಯಶೋಮಾರ್ಗ ಫೌಂಡೇಶನ್ ಕೊಪ್ಪಳದ ತಲ್ಲೂರು ಗ್ರಾಮದಲ್ಲಿರುವ ಕೆರೆಯ ಹೂಳನ್ನು ತೆಗೆದು ಅಭಿವೃದ್ಧಿ ಪಡಿಸಿತ್ತು. ಈ ವರ್ಷದ ಮಳೆಗೆ ಮತ್ತೆ ಅಂತರ್ಜಲ ವೃದ್ಧಿಯಾಗಿದ್ದು ಕೆರೆ ತುಂಬಿ ಹರಿದಿದೆ.

yashomarga-foundation-work-is-worthwhile
ಯಶ್​
author img

By

Published : Sep 30, 2022, 8:01 PM IST

ಕೊಪ್ಪಳ: ಚಿತ್ರ ನಟ ಯಶ್ ಅವರ ಯಶೋಮಾರ್ಗ ಫೌಂಡೇಶನ್ ವತಿಯಿಂದ ಅಭಿವೃದ್ಧಿ ಪಡಿಸಿದ್ದ ಕೆರೆಯೊಂದು ಇಂದು ತುಂಬಿ ನಿಂತಿದ್ದು, ಕೆರೆಯ ಸುತ್ತಮುತ್ತಲ ಗ್ರಾಮದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ ಇದಾಗಿದ್ದು, ಅಂತರ್ಜಲ ಮಟ್ಟ ತೀರಾ ಕುಸಿತದಿಂದ ಈ ಭಾಗದ ರೈತರು ಕೃಷಿ ತೊರೆದು ಬೇರೆ ಉದ್ಯೋಗ ಅರಸಿ ಹೋಗುತ್ತಿದ್ದರು.

ಯಶೋಮಾರ್ಗ ಫೌಂಡೇಶನ್ ಕಾರ್ಯಕ್ಕೆ ಯಶ

ಚಿತ್ರನಟ ಯಶ್ ರೈತರ ಅನುಕೂಲಕ್ಕಾಗಿ ಅವರು 2016 ರಲ್ಲಿ ʻಯಶೋಮಾರ್ಗʼದಿಂದ ಕೆರೆ ಅಭಿವೃದ್ದಿ ಪಡಿಸಿದರು. ಅವರ ಸೇವಾ ಕಾರ್ಯ ಈಗ ಯಶಸ್ಸು ಕಂಡಿದೆ. ಯಶ್ ಕಾರ್ಯಕ್ಕೆ ರೈತರು ಖುಷಿಗೊಂಡಿದ್ದಾರೆ.

ಅಂತರ್ಜಲ ಹೆಚ್ಚಿಸಿದ ಕೆರೆ : 96 ಎಕರೆ ವಿಸ್ತಾರವಿರುವ ತಲ್ಲೂರು ಕೆರೆಯು 1,038 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಇಲ್ಲಿರುವ ಕೆರೆಯು ಹೂಳು ತುಂಬಿತ್ತು. ಸುತ್ತಲಿನ 14 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿತ್ತು.‌ ಕೆರೆ ಅಭಿವೃದ್ದಿಪಡಿಸಿದ ನಂತರ ಈಗ ಅಂತರ್ಜಲಮಟ್ಟ ಹೆಚ್ಚಳವಾಗಿದೆ.

ಇದನ್ನೂ ಓದಿ : ಯಶೋಮಾರ್ಗದ ಮೂಲಕ ಪುನಶ್ಚೇತನಗೊಂಡಿದ್ದ ತಲ್ಲೂರು ಕೆರೆಗೆ ಬಾರದ ನೀರು...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.