ಗಂಗಾವತಿ: ಮಹಿಳೆಯರಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಮುಂದಾದ ಯುವಕನೊಬ್ಬನ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಗಾಪುರ ಗ್ರಾಮದ ಕುಮಾರ ನಾಗಪ್ಪ ಆಡಿನ್ ಎಂಬ ಯುವಕನ ವಿರುದ್ಧ ಮಂಡಕ್ಕಿ ಸಗಟು ವ್ಯಾಪಾರಿ ವಿರುಪಾಪುರ ತಾಂಡಾದ ಕೊಟ್ರೇಶ ಕಬೇರ ಎಂಬುವವರು ದೌರ್ಜನ್ಯ, ಕೊಲೆ ಬೆದರಿಕೆಯ ದೂರು ದಾಖಲಿಸಿದ್ದಾರೆ. ಲಕ್ಷ್ಮಮ್ಮ ಹಾಗೂ ಜ್ಯೋತಿ ಎಂಬುವವರು ಸಂಗಾಪುರಕ್ಕೆ ಆಟೋದಲ್ಲಿ ತೆರಳಿ ಮಂಡಕ್ಕಿ ಮಾರಾಟ ಮಾಡಿ ಅಕ್ಕಿ ಸಂಗ್ರಹಿಸಿಕೊಂಡು ವಾಪಸ್ ಗಂಗಾವತಿಗೆ ಬರುವಾಗ ಸಾಯಿನಗರದ ಕ್ರಷರ್ ಪಾಯಿಂಟ್ ಬಳಿ ಆಟೋ ತಡೆದ ಈ ಆರೋಪಿ ಕುಮಾರ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಐದು ಸಾವಿರ ಮೊತ್ತದ ಹಣ ನೀಡದೇ ಹೋದಲ್ಲಿ ನಿಮ್ಮ ಆಟೋ ಇತ್ತ ತಿರುಗಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾನೆ. ಆತನ ದೌರ್ಜನ್ಯಕ್ಕೆ ಹೆದರಿ ಸ್ಥಳದಲ್ಲಿಯೇ ಐದು ಸಾವಿರ ಹಣ ನೀಡಿದ್ದಾಗಿ ಕೊಟ್ರೇಶ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಅಧಿಕಾರಕ್ಕೇರುವ ಮುನ್ನವೇ ಪಂಚಾಯಿತಿ ಸದಸ್ಯನ ಮೇಲೆ ಎಫ್ಐಆರ್
ಸದ್ಯ ಆರೋಪಿ ಕುಮಾರ ನಾಗಪ್ಪ ಆಡಿನ್ ವಿರುದ್ಧ ದೂರು ದಾಖಲಾಗಿದೆ.