ETV Bharat / state

ಕೊಪ್ಪಳದಲ್ಲಿ ಕೋವಿಡ್​​ಗೆ ​ ಮಹಿಳೆ ಬಲಿ: 6 ಕ್ಕೇರಿದ ಸಾವಿನ ಸಂಖ್ಯೆ - Covid in Koppal

ಕಾರಟಗಿ ಪಟ್ಟಣದ 60 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾಳೆ. ತೀವ್ರ ಉಸಿರಾಟದ ತೊಂದರೆಯಿಂದ ನಿನ್ನೆಯಷ್ಟೆ ಕೊಪ್ಪಳದ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು.

Covid in Koppal
ಕೊಪ್ಪಳದಲ್ಲಿ ಕೋವಿಡ್​ ಮಹಿಳೆ ಬಲಿ
author img

By

Published : Jul 11, 2020, 6:21 PM IST

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇಂದು ಮಹಿಳೆಯೊಬ್ಬರು ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.

Covid in Koppal
ಕೊಪ್ಪಳದಲ್ಲಿ ಕೋವಿಡ್​ ಮಹಿಳೆ ಬಲಿ

ಕಳೆದ ಎರಡು ದಿನಗಳಿಂದ ಕೊರೊನಾ ಸೋಂಕಿತರ ಸಾವು ಸಂಭವಿಸುತ್ತಿದ್ದು, ಇಂದು ಸಹ ಸೋಂಕಿತ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಕಾರಟಗಿ ಪಟ್ಟಣದ 60 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾಳೆ. ತೀವ್ರ ಉಸಿರಾಟದ ತೊಂದರೆಯಿಂದ ನಿನ್ನೆಯಷ್ಟೆ ಕೊಪ್ಪಳದ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಆ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ನಿನ್ನೆಯೂ ಸಹ ಭಾಗ್ಯನಗರ ಪಟ್ಟಣದ 42 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು,‌ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರೋದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.