ಕುಷ್ಟಗಿ (ಕೊಪ್ಪಳ) : ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರ ಮಗ ರಾಜೀವ್ ಗಾಂಧಿ ಅವರ ಕೈ ಹಿಡಿದ ಸೋನಿಯಾ ಗಾಂಧಿ ದೇಶದ ಸೊಸೆಯಾಗಿ, ಈ ದೇಶವನ್ನು ನಮ್ಮ ಮನೆ ಎಂದು ಒಪ್ಪಿಕೊಂಡಿದ್ದಾರೆ. ಸಾಯುವವರೆಗೂ ಇಲ್ಲಿಯೇ ಇದ್ದು, ಇಲ್ಲಿಯೇ ಮಣ್ಣಾಗಬೇಕೆಂಬ ದೊಡ್ಡ ಮಾತನ್ನು ಅವರು ಹೇಳಿದ್ದಾರೆ. ಇಂತಹ ತ್ಯಾಗಮಯಿ ಸೊಸೆ ನಮ್ಮ ಕಾಂಗ್ರೆಸ್ ಪಕ್ಷದ ವರಿಷ್ಠೆಯಾಗಿರುವುದು ಕಾಂಗ್ರೆಸ್ ಪಕ್ಷದ ಹೆಮ್ಮೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.
ಭಾನುವಾರ, ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ನಿವಾಸದ ಆವರಣದಲ್ಲಿ ಕುಷ್ಟಗಿ-ಹನುಮಸಾಗರ ಮಹಿಳಾ ಕಾಂಗ್ರೆಸ್ ಘಟಕದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಈ ದೇಶದ ತ್ಯಾಗಮಯಿ ಸೊಸೆಯಾಗಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯಾಗಿ ಪಕ್ಷವನ್ನು ಮುನ್ನಡೆಸುತ್ತಿರುವುದು ನಮ್ಮ ಕಾಂಗ್ರೆಸ್ ಪಕ್ಷದ ಹೆಮ್ಮೆ ಎನಿಸುತ್ತಿದೆ ಎಂದರು.